ಕಾಣಿಯೂರು ಪ್ರೌಢ ಶಾಲೆಯ ಅಹಿಜಿತ್ ಜಾವೆಲಿನ್ ಎಸೆತದಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

0

ಕಾಣಿಯೂರು: ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಚೇರಿ ದ.ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ, ಸರಕಾರಿ ಪ್ರೌಢ ಶಾಲೆ ಅತ್ತಾವರ ಮಂಗಳೂರು ದಕ್ಷಿಣ ವಲಯ ಇವರ ಆಶ್ರಯಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನ 15ರಂದು ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಅಹಿಜಿತ್ ಕೆ.ಎಂ. ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕಾಣಿಯೂರು ಗ್ರಾಮದ ಕಟ್ಟತ್ತಾರು ಮಾಧವ ಗೌಡ ಅವರ ಪುತ್ರ.

LEAVE A REPLY

Please enter your comment!
Please enter your name here