ಕುಂಬ್ರ ಮರ್ಕಝುಲ್ ಹುದಾ ಬುರೈದಾ ಸಮಿತಿ

0

ಅಧ್ಯಕ್ಷರಾಗಿ ಸಯ್ಯದ್, ಪ್ರ.ಕಾರ್ಯದರ್ಶಿ ಇಸ್ಮಾಯಿಲ್, ಕೊಶಾಧಿಕಾರಿ ಝಕರಿಯಾ ಪುನರಾಯ್ಕೆ

ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ಸೌದಿ ಅರೇಬಿಯಾ ಬುರೈದಾ ಘಟಕದ ವಾರ್ಷಿಕ ಮಹಾಸಭೆಯು ಬುರೈದಾ ಇಸ್ತಿರಾಹ ರೌಳಾ ಸಭಾಂಗಣದಲ್ಲಿ ನಡೆಯಿತು.


ಮರ್ಕಝುಲ್ ಹುದಾ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ನೇತೃತ್ವ ನೀಡಿದರು. ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಶಾದ್ ಪೋಳ್ಯ, ಕಾರ್ಯದರ್ಶಿ ಶಂಸುದ್ದೀನ್ ಬೈರಿಕಟ್ಟೆ ಆಯ್ಕೆ ಪ್ರಕ್ರಿಯೆಗೆ ಮುಂದಾಳತ್ವ ವಹಿಸಿದರು. ಸಮಿತಿಯ ಅಧ್ಯಕ್ಷರಾಗಿ ಸಯ್ಯದ್ ವೈ.ಎಂ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಆನಡ್ಕ ಹಾಗೂ ಕೋಶಾಧಿಕಾರಿಯಾಗಿ ಝಕರಿಯಾ ಕೊರಿಂಗಿಲ ಅವರನ್ನು ಪುನರಾಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಹಾಗೂ ಸಲಹೆಗಾರರಾಗಿ ಅಬ್ಬಾಸ್ ಅಲಿ ಕುಕ್ಕುವಳ್ಳಿ, ಅಬ್ದುಲ್ ಖಾದರ್ ಕನ್ನಂಗಾರ್, ಅಬ್ದುಲ್ ರಝಾಕ್ ನೆಕ್ಕಿಲ್ ಅವರನ್ನು ಆರಿಸಲಾಯಿತು. ಉಪಾಧ್ಯಕ್ಷರಾಗಿ ಇರ್ಶಾದ್ ಸಚ್ಚೇರಿಪೇಟೆ, ಅಬ್ದುಲ್ಲಾ ಕೊಯ್ಲಾ, ಜತೆ ಕಾರ್ಯದರ್ಶಿಯಾಗಿ ಬಶೀರ್ ಕನ್ಯಾನ, ಸಂಚಾಲಕರಾಗಿ ಅಬ್ದುಲ್ಲತೀಫ್ ಶೇರಿ, ತಾಜುದ್ದೀನ್ ಉಪ್ಪಿ ನಂಗಡಿ ಆಯ್ಕೆಯಾದರು. ಕಾರ್ಯಕಾರಿ ಸದಸ್ಯರಾಗಿ ಅಶ್ರಫ್ ಬುಳ್ಳೇರಿಕಟ್ಟೆ, ಇಬ್ರಾಹಿಂ ನೆಕ್ಕರೆ, ರಾಶಿದ್ ವೈ.ಎಂ.ಕೆ, ರಮೀಝ್ ಪಾಲ್ತಾಡ್, ಅಶ್ರಫ್ ನೆಕ್ಕಿಲ್, ಶಂಸುದ್ದೀನ್ ಸರಾವು, ಖಲೀಲ್ ಇರ್ದೆ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಸಯ್ಯದ್ ವೈ.ಎಂ.ಕೆ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ ಉದ್ಘಾಟಿಸಿದರು. ರಾಷ್ಟ್ರೀಯ ಸಮಿತಿಯ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ವಿಷಯ ಮಂಡಿಸಿದರು. ಕೋಶಾಧಿಕಾರಿ ಝಕರಿಯಾ ಕೊರಿಂಗಿಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಆನಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here