ಪುತ್ತೂರು: ಪುತ್ತೂರು ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯಲ್ಲಿ ಆವಿ ಹೀರಿಕೊಳ್ಳುವ ಯಂತ್ರ(Vapour Absorption Machine)ವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಉದ್ಘಾಟಿಸಿದರು.
ಆವಿ ಹೀರಿಕೊಳ್ಳುವ ಯಂತ್ರವು ತಂಪಾಗಿಸುವ ಪ್ರಕ್ರಿಯೆಗೆ ಅಗತ್ಯವಿರುವ ಶಕ್ತಿಯನ್ನು ಒದಗಿಸಲು ಶಾಖ ಮೂಲವನ್ನು ಬಳಸುವ ರೆಫ್ರಿಜರೇಟರ್ ಆಗಿದೆ. ಇದರಿಂದ,ಇಡೀ ಚಾಕಲೇಟ್ ಕಾರ್ಖಾನೆಯ ಹವಾನಿಯಂತ್ರಣಕ್ಕಾಗಿ ವಿದ್ಯುತ್ ಶಕ್ತಿಯನ್ನು ಉಳಿಸುವುದರ ಮೂಲಕ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು.
ಕ್ಯಾಂಪ್ಕೊ ಸಂಸ್ಥೆಯ ಮಾಜಿ ನಿರ್ದೇಶಕರೂ ಆಗಿದ್ದ ಚನಿಲ ತಿಮ್ಮಪ್ಪ ಶೆಟ್ಟಿಯವರು ಇತ್ತೀಚೆಗಷ್ಟೇ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ನೇಮಕಗೊಂಡಿದ್ದರು. ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಎ ಕಿಶೋರ್ ಕುಮಾರ್ ಕೊಡ್ಗಿಯವರು ಸಂಸ್ಥೆಯ ನಿರ್ದೇಶಕರ ಸಮ್ಮುಖದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಎಮ್ ಕೃಷ್ಣಕುಮಾರ್, ನಿರ್ದೇಶಕರಾದ ಕೆ ಬಾಲಕೃಷ್ಣ ರೈ, ಪದ್ಮರಾಜ್ ಪಟ್ಟಾಜೆ, ಮಹೇಶ್ ಚೌಟ, ರಾಧಾಕೃಷ್ಣನ್ ಕೆ, ಸತ್ಯನಾರಾಯಣ ಪ್ರಸಾದ್, ಡಾ.ಜಯಪ್ರಕಾಶ್, ರಾಘವೇಂದ್ರ ಭಟ್ ಕೆದಿಲ ಮತ್ತು ಚಾಕಲೇಟ್ ಕಾರ್ಖಾನೆಯ AGM ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು.