ಪುತ್ತೂರು: ಜಿ. ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ಪುತ್ತೂರು ಮಳಿಗೆಯಲ್ಲಿ ’ಆಂಟಿಕ್ ಫೆಸ್ಟ್’ ನಡೆಯುತ್ತಿದೆ. ನ. 27ರ ತನಕ ನಡೆಯುವ ಈ ಪ್ರಾಚೀನ ಶೈಲಿಯ ಆಭರಣಗಳ ಉತ್ಸವ ’ಆಂಟಿಕ್ ಫೆಸ್ಟ್’ನಲ್ಲಿ ಸಾವಿರಕ್ಕೂ ಮಿಕ್ಕಿದ ಪುರಾತನ ಶೈಲಿಯ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಗ್ರಾಹಕರಿಗೆ ಅಹ್ಲಾದಕರ ಖರೀದಿಯ ವಾತಾವರಣ ಇಲ್ಲಿದ್ದು ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ಆಭರಣಗಳ ಆಯ್ಕೆ ಲಭ್ಯವಿದೆ. ಮದುವೆ ಚಿನ್ನಾಭರಣಗಳು, ಆಧುನಿಕ 916 ಪರಿಶುದ್ಧತೆಯಲ್ಲಿ ಪ್ರಾಚೀನ ಶೈಲಿಯ ’ಪ್ರಾಚಿ’ ಬ್ರಾಂಡ್‌ನ ಚಿನ್ನಾಭರಣಗಳು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ಆಭರಣಗಳ ಸಂಗ್ರಹ ಇಲ್ಲಿದೆ. ಸಂಸ್ಥೆಯು ಡಿಜಿಟಲ್ ಪೇಮೆಂಟ್‌ಗೆ ಪ್ರಾಮುಖ್ಯತೆ ನೀಡುತ್ತಿದ್ದು UPI / IMPS / Rupay Card ಬಳಸಿ ಬಿಲ್ ಪಾವತಿಸುವ ಗ್ರಾಹಕರಿಗೆ ವಿಶೇಷ ರಿಯಾಯಿತಿ ಇದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದೆ.