ಸರ್ವಜ್ಞ ಅಕಾಡೆಮಿಯಲ್ಲಿ ಐಎಎಸ್, ಕೆಎಎಸ್ ತರಬೇತಿಗೆ ಅರ್ಜಿ ಆಹ್ವಾನ

0

ಪುತ್ತೂರು: ಸರ್ವಜ್ಞ ಐಎಎಸ್ ಅಕಾಡೆಮಿ ಮುಂಬರುವ 2022- 23ನೇ ಸಾಲಿನ ಐಎಎಸ್ ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಭೂಗೋಳಶಾಸ್ತ್ರ, ಗಣಿತ, ಮನೋ ಸಾಮರ್ಥ್ಯ, ಮೌಖಿಕ ಪರೀಕ್ಷೆಗಳು, ದೇಹದಾರ್ಢ್ಯ ತರಬೇತಿ, ಮುಖ್ಯ ಪರೀಕ್ಷೆ, ಸಂದರ್ಶನ ಮುಂತಾದ ವಿಷಯಗಳನ್ನು ತರಬೇತಿ ಒಳಗೊಂಡಿದೆ. ಒಂದು ವರ್ಷದ ತರಬೇತಿಯಿಂದ ಐಎಎಸ್, ಐಪಿಎಸ್, ಐಆರ್‌ಸ್, ಕೆಎಎಸ್, ಪಿಡಿಒ, ಪಿಎಸ್‌ಐ ಪೊಲೀಸ್ ಎಫ್‌ಡಿಎ ಎಸ್‌ಡಿಎ ತಾಂತ್ರಿಕೇತರ ಪರೀಕ್ಷೆಗಳು ಮುಂತಾದ ಹತ್ತರಿಂದ ಹನ್ನೆರಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅವಕಾಶವಿದೆ.

ವಿವಿಧ ಬ್ಯಾಚುಗಳು: ಪದವೀಧರರಿಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10ರಿಂದ ಸಂಜೆ ನಾಲ್ಕರ ತನಕದ ಒಂದು ವರ್ಷದ ತರಬೇತಿ ಹಾಗೂ ಖಾಸಗಿ ಉದ್ಯೋಗ ಮಾಡುತ್ತಿರುವವರಿಗೆ ಅಥವಾ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಆದಿತ್ಯವಾರ ಬೆಳಿಗ್ಗೆ 9:30 ರಿಂದ ಸಂಜೆ 3 ಗಂಟೆವರೆಗಿನ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ತರಬೇತಿ: ಹೈಸ್ಕೂಲು ಪಿಯುಸಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವಾಗಲೆ ಐಎಎಸ್ ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿಶೇಷ ತರಬೇತಿ ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದು ಶನಿವಾರ ಅಥವಾ ಆದಿತ್ಯವಾರದ ಬ್ಯಾಚುಗಳಲ್ಲಿ ತರಬೇತಿ ಪಡೆಯಬಹುದು. ಕನಿಷ್ಠ ಒಂದು ವರ್ಷದ ತರಬೇತಿ ನೀಡಲಾಗುತ್ತಿದ್ದು ಗರಿಷ್ಠ ಸರಕಾರಿ ಉದ್ಯೋಗ ಸಿಗುವವರೆಗೆ ತರಬೇತಿ ಪಡೆಯುವ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಸುರೇಶ್ ಎಂ ಎಸ್ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಪಂಪ್‌ವೆಲ್ ಬಳಿ ಬರುವ ಸತ್ಯಂ ಅರ್ಕೆಡ್‌ನ ಮೂರನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ವಜ್ಞ ಐಎಎಸ್ ಅಕಾಡೆಮಿಯ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ 9481033331 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here