ಎಪಿಎಂಸಿ ರಸ್ತೆಯ ರೈಲ್ವೆ ಅಂಡರ್ ಪಾಸ್ ಗಾಗಿ ಬೆಳ್ಳಂಬೆಳಗ್ಗೆ ಹಳಿ ತೆರವು ಮಾಡಿ ನಡೆಯುತ್ತಿದೆ ರಸ್ತೆ ಸಂಪರ್ಕದ ಕಾಮಗಾರಿ !

ಬ್ರಹತ್ ಗಾತ್ರದ ಕ್ರೇನ್, ಹಿಟಾಚಿ ಬಳಕೆ, ನೂರಾರು ಕಾರ್ಮಿಕರಿಂದ ಮದ್ಯಾಹ್ನದ ಒಳಗಾಗಿ ಕೆಲಸ ಪೂರ್ಣ !

ಪುತ್ತೂರು: ಮಂಗಳೂರು ಬೆಂಗಳೂರು ಸೇರಿದಂತೆ, ಲೋಕಲ್ ಸಹಿತ ದಿನವಿಡೀ 30 ಕ್ಕೂ ಅಧಿಕ ರೈಲು  ಸಂಚರಿಸುವ ಕಬಕ ಪುತ್ತೂರು ರೈಲು ಹಾದಿಯಲ್ಲಿ ಅಂಡರ್ ಪಾಸ್ ನಿರ್ಮಾಣದ ಪ್ರಮುಖ ಕಾಮಗಾರಿಯಾಗಿ ರಸ್ತೆ ಸಂಪರ್ಕದ ಕೆಲಸ ನ.19 ರ ಬೆಳ್ಳಂಬೆಳಗೆ ಆರಂಭಗೊಂಡಿದೆ.
ರೈಲ್ವೆ ಹಳಿಗಳನ್ನು ತೆಗೆದು, ಗುಂಡಿ ತೆಗೆದು ಸಿದ್ಧ ಕಾಂಕ್ರೀಟ್ ಸ್ಲ್ಯಾಬ್​​ಗಳನ್ನು ಅಳವಡಿಸುವ ಕೆಲಸ ನಡೆಯುತ್ತದೆ. ಬಳಿಕ ಮೊದಲಿನಂತೆ ರೈಲು ಮಾರ್ಗ ಹೇಗಿತ್ತೋ ಹಾಗೆಯೇ ಹಾಕಿ ಹಳಿಗಳನ್ನು ಜೋಡಿಸಿ ರೈಲು ಸಂಚರಿಸಲು ಅನುವು ಮಾಡಿಕೊಡಲಾಗುತ್ತದೆ. ಕಾಮಗಾರಿಗಾಗಿ ಎರಡು ದೊಡ್ಡ ಕ್ರೇನ್‌ಗಳು, ಐದಾರು ಹಿಟಾಚಿ, ಜೆಸಿಬಿಗಳು, ಟಿಪ್ಪರ್‌ಗಳನ್ನು ಈ ಕಾಮಗಾರಿಗೆ ಬಳಸಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.