ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಕರೆ ಉತ್ಸವ

0

‘ಎರುಕೊಳ’ ದೈವದೊಂದಿಗೆ ಪೂಕರೆ ಕಟ್ಟೆಗೆ ದೇವರ ಆಗಮನ ವಿಶೇಷ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.20 ರಂದು ದೇವಳದ ತಂತ್ರಿ ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ವೇ ಮೂ ಶ್ರೀಧರ್ ತಂತ್ರಿಯವರ ನೇತೃತ್ವದಲ್ಲಿ ಪೂಕರೆ ಉತ್ಸವ ವಿಜೃಂಭಣೆಯಿಂದ ನಡೆದಿದೆ. ನಂದಿ ಮುಖವಾಡ ಧರಿಸಿದ ‘ಎರುಕೊಳ’ ದೈವದೊಂದಿಗೆ ದೇವರ ಉತ್ಸವ ಬರುವುದೇ ವಿಶೇಷ.


ಸಂಜೆ ದೇವರು ಉತ್ಸವ ಸವಾರಿಗೆ ದೇವಳದ ಪಶ್ಚಿಮ ದ್ವಾರದಿಂದ ಹೊರಟು ಪೇಟೆ ಸವಾರಿಯಲ್ಲಿ ನಂದಿಯ ಮುಖವಾಡ ಧರಿಸಿದ ಎರುಕೊಳ ದೈವದ ಜೊತೆಗೆ ನೆಲ್ಲಿಕಟ್ಟೆಯಲ್ಲಿರುವ ಪೂಕರೆ ಕಟ್ಟೆಗೆ ಆಗಮಿಸುವ ಸಂಪ್ರದಾಯ. ಅಲ್ಲಿಯ ತನಕ ಎರುಕೊಳ ದೈವ ಜೊತೆಯಲ್ಲಿರುತ್ತದೆ. ಶ್ರೀ ದೇವರ ಉತ್ಸವ ಪೂಕರೆ ಕಟ್ಟೆಯಿಂದ ದೇವಳದ ಗದ್ದೆಯನ್ನು ನೋಡಿದ ಬಳಿಕ ಕಟ್ಟೆಯಲ್ಲಿ ವಿರಾಜಮಾನರಾದರು. ವೇ ಮೂ ಶ್ರೀಧರ್ ತಂತ್ರಿ ಮತ್ತು ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಮೂಲ ನಾಗ ಸನ್ನಿಧಿಗೆ ತೆರಳಿದರು.

ತಂತ್ರಿಯವರು ಪೂಕರೆ ಗದ್ದೆಗೆ ಪ್ರಾರ್ಥನೆ ಮಾಡಿದರು. ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಅವರು ನಾಗ ತಂಬಿಲ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪೂಕರೆ ಸಿದ್ಧ ಪಡಿಸಿದ ಸ್ಥಳದಲ್ಲಿ ಹಿರಿಯರಾದ ಕಿಟ್ಟಣ್ಣ ಗೌಡರು ನುಡಿಗಟ್ಟಿನೊಂದಿಗೆ ಪ್ರಾರ್ಥಿಸಿದದರು. ಪೂಕರೆ ಉತ್ಸವಕ್ಕೆ ಸಂಬಂಧಿಸಿದವರು ದೇವರಮಾರು ಗದ್ದೆ ಮತ್ತು ಬಾಕಿತಮಾರು ಗದ್ದೆಯಲ್ಲಿ ಪೂಕರೆ ಇಟ್ಟು ಪ್ರಾರ್ಥನೆ ಮಾಡಿದರು. ಬಳಿಕ ಪೂಕರೆ ಕಟ್ಟೆಯಲ್ಲಿ ಶ್ರೀದೇವರಿಗೆ ದೀವಟಿಕೆ ಪ್ರಣಾಮ್, ಕಟ್ಟೆಪೂಜೆ ನಡೆದು, ಭಕ್ತರಿಗೆ ಸೀಯಾಳ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಶೇಖರ್ ನಾರಾವಿ, ಡಾ. ಸುಧಾ ಎಸ್ ರಾವ್, ರಾಮ್‌ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಪೂಕರೆ ಕಟ್ಟೆಯ ಸೇವೆ ಮಾಡುತ್ತಿರುವ ಕೆ.ವಿ.ಪೈ ಮತ್ತು ಬಾಲಕೃಷ್ಣ ಪೈ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ರಮೇಶ್ ಬಾಬು, ನಗರಸಭಾ ಸದಸ್ಯರಾಗಿರುವ ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ದೇವಪ್ಪನೋಂಡಾ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ರತ್ನಾಕರ ನಾಕ್, ರಾಮಚಂದ್ರ ಘಾಟೆ, ಶ್ರೀಧರ್ ಪಟ್ಲ, ಯು.ಲೋಕೇಶ್ ಹೆಗ್ಡೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಪೂಕರೆ ಅಲಂಕಾರವೇ ವಿಶೇಷ
ಸಂಪ್ರದಾಯದಂತೆ ತೆಂಕಿಲದ ಮೋಂಟ ಮೊಗೇರ ಅವರ ಪುತ್ರರಾದ ಲೋಕೇಶ್ ಮತ್ತು ಲೋಹಿತ್ ಮತ್ತಿತರರು ಸೇರಿಕೊಂಡು ಪೂಕರೆ ನಡುತ್ತಾರೆ. ಇದಕ್ಕೂ ಮೊದಲು ಪೂಕರೆಯನ್ನು ಅಡಿಕೆ ಮರದ ಮತ್ತು ಬೆತ್ತವನ್ನು ಉಪಯೋಗಿಸಿ ಕಟ್ಟಲಾಗುತ್ತದೆ ಕೃಷ್ಣನಗರದ ಹರೀಶ್ ಆಚಾರ್ಯ ಅದನ್ನು ನಿರ್ಮಾಣ ಮಾಡಿದ ಬಳಿಕ ದೇವಿಪ್ರಸಾದ್ ಭಂಡಾರಿ ಅವರು ಕೇಪುಳ ಮತ್ತು ಪಾದೆ ಹೂವನ್ನು ಕದಳಿ ಬಾಳೆಗಿಡದ ನಾರಿನಿಂದ ಕಟ್ಟಿ ಪೂಕರೆಯನ್ನು ಶೃಂಗರಿಸಲಾಗುತ್ತದೆ. ಪೂಕರೆ ಗದ್ದೆಗೆ ಕೊಂಡೊಯ್ಯುವಲ್ಲಿ ಸುಂದರ, ವಸಂತ, ಚನಿಯ, ವಿಜಯ ಮತ್ತು ಮತ್ತೊಂದು ಕಡೆಯಿಂದ ದೇವಳದ ನೌಕರರು ಸಹಕರಿಸಿದರು.

LEAVE A REPLY

Please enter your comment!
Please enter your name here