ಪುತ್ತೂರು: ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿ ಸಂಸ್ಥೆ ಯ ವೆಬ್ಸೈಟ್ ಅನಾವರಣ ಹಾಗೂ ದೇಯಿ ಬೈದೆದಿ ಚಲನ ಚಿತ್ರ ಪ್ರದರ್ಶನ ಕಾರ್ಯಕ್ರಮ ಬನ್ನಂಜೆ ಶ್ರೀ ನಾರಾಯಣ ಗುರು ಆಡಿಟೋರಿಯಂ ನಲ್ಲಿ ಸಂಜೆ ಗಂಟೆ 5.30 ಕ್ಕೆ ಸರಿಯಾಗಿ ಜರಗಿತು.
ಅಧ್ಯಕ್ಷತೆ ಯನ್ನು ಸಂಸ್ಥೆ ಯ ಅಧ್ಯಕ್ಷ ದಾಮೋದರ ಕಲ್ಮಾಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಕಂಕನಾಡಿ ಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ ಚಿತ್ತರಂಜನ್ , ಬಿಲ್ಲವರ ಸೇವಾ ಸಂಘ ಬನ್ನಂಜೆ ಅಧ್ಯಕ್ಷರ ಮಾಧವ ಬನ್ನಂಜೆ ಉಡುಪಿ ಭಾಗವಹಿಸಿದರು.
ಸನ್ಮಾನಿತಾರಾಗಿ ಕೆ ಮಂಜಪ್ಪ, ಸುವರ್ಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಯು ನಾರಾಯಣ, ಉಪಾಧ್ಯಕ್ಷರಾದ ಶೇಖರ್ ಮಾಸ್ಟರ್ ಕಲ್ಮಾಡಿ, ಚಲನ ಚಿತ್ರನಟ ಹಾಗೂ ಸಂಸ್ಥೆ ಯ ವಿಶ್ವಸ್ಥರಾದ ಸೂರ್ಯೋದಯ್ ಪೆರಂಪಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ದಾಮೋದರ ಕಲ್ಮಾಡಿ ಸ್ವಾಗತಿಸಿ, ಪ್ರಾರ್ಥನೆಯನ್ನು ಚಲನ ಚಿತ್ರದಲ್ಲಿ ಹಾಡಿದ ಕಲಾವತಿ ದಯಾನಂದ ನೆರವೇರಿಸಿದರು, ಅತಿಥಿಗಳಾದ ಚಿತ್ತರಂಜನ್ರವರು ಕಾರ್ಯಕ್ರಮದ ಉದ್ಘಾಟನೆ ಹಾಗೂ ವೆಬ್ಸೈಟ್ ಅನಾವರಣಗೊಳಿದರು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಕೆ ಮಂಜಪ್ಪ ಸುವರ್ಣರವರಿಗೆ ಫಲಾಪುಷ್ಪ ಸನ್ಮಾನ ಪತ್ರ ಹಾಗೂ ರೂ 5000/- ನೀಡಿ ಗೌರವಿಸಲಾಯಿತು. ನಂತರ ಸಂಸ್ಥೆಯ ಗೌರವ ಅಧ್ಯಕ್ಷ ಯು ನಾರಾಯಣ, ಅತಿಥಿ ಮಾಧವ ಬನ್ನಂಜೆ. ಚಲನ ಚಿತ್ರ ನಟ ಸೂರ್ಯೋದಯ್ ಪೆರಂಪಲ್ಲಿ ರವರಿಗೆ ಗೌರವ ಸನ್ಮಾನ ಮಾಡಲಾಯಿತು. ವೆಬ್ಸೈಟ್ ಮಾಡಲು ಸಹಕರಿಸಿದ ಹರೀಶ್ ಎಮ್ ಕೆ ಹಾಗೂ ಇನ್ಫಾನ ಟೆಕ್ನಾಲಜಿ ಯ ಉಮೇಶ್ ಕಲ್ಮಾಡಿ ಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು . ಸುಮಾರು 400 ಕ್ಕೂ ಮಿಕ್ಕಿ ಜನರು ಆಗಮಿಸಿದ್ದರು ವಂದನಾರ್ಪಣೆ ಯನ್ನು ಸಂಸ್ಥೆಯ ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ನೆರವೇರಿಸಿದರು, ಕಾರ್ಯಕ್ರಮ ನಿರೂಪಣೆ ಯನ್ನು ದಯಾನಂದ ಉಗ್ಗೇಲ್ಬೆಟ್ಟು. ಹಾಗೂ ಮೈತ್ರಿ ಕೋಟ್ಯಾನ್ ನೆರವೇಸಿದರು.