ಪುತ್ತೂರು : ಕಬಕ ಗ್ರಾಮದ ಪೋಳ್ಯ ಶ್ರೀಲಕ್ಷ್ಮೀವೆಂಕಟರಮಣ ಮಠದ ಆವರಣದಲ್ಲಿ 2023 ಜ.26 ರಿಂದ 29ರ ತನಕ ನಡೆಯುವ ಜಾತ್ರೆಯ ಬಗ್ಗೆ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಉಮಾಶಂಕರ ಎರ್ದುಕಳರವರ ಅಧ್ಯಕ್ಷತೆಯಲ್ಲಿ ಭಕ್ತಾದಿಗಳ ಸಭೆ ನಡೆಯಿತು.
ಸಭೆಯಲ್ಲಿ ಉತ್ಸವ ಸಮಿತಿ ರಚಿಸಲಾಯಿತು. ಉತ್ಸವ ಸಮಿತಿಯ ಅಧ್ಯಕ್ಷರಾಗಿ ವಿ.ಹಿಂ.ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಕಾರ್ಯದರ್ಶಿಯಾಗಿ ಸುದರ್ಶನ ಗೌಡ ಮುರ, ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಶ್ರೀಶಾಂತಿ, ಮೋಹನ್ ಗೌಡ, ಪ್ರಶಾಂತ ಕಳಮೆಮಜಲು, ಜಾನಕಿ ಬಾಲಕೃಷ್ಣ ಮುರ, ಕೋಶಾಧಿಕಾರಿಯಾಗಿ ನಿವೃತ್ತ ಪೋಲಿಸ್ ಅಧಿಕಾರಿ ಸದಾಶಿವ ಭಟ್ ಕೂವೆತ್ತಿಲರವರನ್ನು ಆಯ್ಕೆ ಮಾಡಲಾಯಿತು.
ಅಡಳಿತ ಸಮಿತಿಯ ಸದಸ್ಯರಾದ ಕೃಷ್ಣ ಭಟ್ ಹನುಮಜೆ, ನಂದಕಿಶೋರ್ ಪೋಳ್ಯ, ಕೃಷ್ಣಪ್ರಸಾದ್ ಕಡವ, ರಾಮಚಂದ್ರ ಭಟ್ ಕೊಡಿಪ್ಪಾಡಿ, ವೇ.ಮೂ.ಸತ್ಯನಾರಾಯಣ ಭಟ್, ಕೃಷ್ಣ ಗೌಡ, ಪ್ರಸಾದ ಗೌಡ ಪೋಳ್ಯ, ಸತ್ಯನಾರಾಯಣ ಭಟ್ ವಾಲ್ತಜೆ, ಜಾತ್ರೋತ್ಸವದ ಮಾಜಿ ಅಧ್ಯಕ್ಷ ಶಿವರಾಮ ಕಜೆ ಸೂಕ್ತ ಸಲಹೆ ಸೂಚನೆ ನೀಡಿದರು. ನರಸಿಂಹ ಕಜೆ, ವೆಂಕಟರಮಣ ಭಟ್ ವೈ, ಜಯಕರ ಮಯ್ಯ, ಉದಯಕುಮಾರ್ ಹನುಮಜೆ, ವೆಂಕಟೇಶ ಪೋಳ್ಯ, ಗಿರೀಶ್ ಭಟ್ ಪೋಳ್ಯ, ಪ್ರಶಾಂತ ಮುರ, ಪ್ರಶಾಂತ ಕಳಮೆ ಮಜಲು, ಈಶ್ವರ ಪುಳಿತ್ತಡಿ, ಸುರೇಶ್ ಪೊಸವಳಿಕೆ, ಜಿನ್ನಪ್ಪ ಪೋಳ್ಯ, ಜಯಂತ, ಉಮೇಶ್ ಪೋಳ್ಯ, ದೇವಪ್ಪ ನಾಯ್ಕ, ಮೋಹನ ಪಿ, ತಿರುಮಲೇಶ್ವರ ಗೌಡ ಮೂಲೆಕಾಡು, ಪುರುಷೋತ್ತಮ ಗೌಡ ಮೂಲೆಕಾಡು, ಚೋಮ ನಲಿಕೆ, ಕಿರಣ, ರವಿ, ಯತೀಶ, ನಿಶಾಂತ, ಕಾವ್ಯ ಮೂಲೆಕಾಡು, ಆದಿತ್ಯ, ಶ್ರಾವ್ಯ ಮುರ, ಗಣೇಶ ಗೌಡ, ಉಮೇಶ ಮೂಲೆಕಾಡು, ಉಮೇಶ್ ಕುಮಾರ್ ಶಿಮ್ಲಡ್ಕ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.