ಹದಗೆಟ್ಟ ಅರ್ಕೆಚ್ಚಾರು – ನೇರ್ಲಾಜೆ – ಸೂರ್ಯ ರಸ್ತೆ, ವರುಷವಾದರೂ ನಿರ್ಮಾಣವಾಗದ ತಡೆಗೋಡೆ  ಗ್ರಾಮಸ್ಥರ ಮನವಿಗೆ ಸಿಗದ‌ ಸ್ಪಂಧನೆ – ಸ್ಥಳೀಯರಿಂದ ಚುನಾವಣಾ ಬಹಿಷ್ಕಾರಕ್ಕೆ ಸಿದ್ಧತೆ

0

ವಿಟ್ಲ: ಕಂಬಳಬೆಟ್ಟುವಿನಿಂದ ಅರ್ಕೆಚ್ಚಾರು – ನೇರ್ಲಾಜೆ -ಮುಂಡ್ರಬೈಲು – ಸೂರ್ಯ ಸಂಪರ್ಕ ರಸ್ತೆಯ ಶೋಚನೀಯ ಸ್ಥಿತಿಯ ಬಗ್ಗೆ ಹಾಗೂ ಅರ್ಕೆಚ್ಚಾರು ಸಮೀಪದ ಹೊಳೆಬದಿಗೆ ತಡೆಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಹಲವಾರು ಭಾರಿ ಸಂಬಂಧಪಟ್ಟ ಇಲಾಖೆ, ಇಡ್ಕಿದು ಗ್ರಾಮ ಪಂಚಾಯತ್, ಸ್ಥಳೀಯ ಜನಪ್ರತಿನಿಧಿಗಳ ಸಹಿತ ಶಾಸಕರಿಗೆ ಮನವಿ ಸಲ್ಲಿಸಿದ್ದರಾದರೂ ಪ್ರತಿಫಲ ಮಾತ್ರ ಶೂನ್ಯ.

ಈ ಭಾಗದಲ್ಲಿ ಅನೇಕ ಮಧ್ಯಮ ವರ್ಗದ ಜನರು ವಾಸಿಸುತ್ತಿದ್ದು, ಸುಮಾರು 400 ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಈ ರಸ್ತೆಯಿಂದಾಗಿ ಶಾಲಾ ಮಕ್ಕಳ ಸಹಿತ ನೂರಾರು ಮಂದಿ ದಿನಂಪ್ರತಿ ಸಂಚರಿಸುತ್ತಿದ್ದಾರೆ. ಆದರೆ ಇತ್ತಕಡೆ ಯಾರೂ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಶಾಸಕರ ಭರವಸೆಗೆ ವರುಷ:

ವರುಷದ ಹಿಂದೆ ಈ ರಸ್ತೆಯ ದುರವಸ್ಥೆಯ ಬಗ್ಗೆ ಹಾಗೂ ಅರ್ಕೆಚ್ಚಾರು ಎಂಬಲ್ಲಿ ರಸ್ತೆ ಬದಿಯ ಹೊಳೆಯ ತಡೆಗೋಡೆ ನಿರ್ಮಿಸಿ ಕೊಡುವಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರುರವರಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದರು. ಆ ಬಳಿಕದ ದಿನಗಳಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕರು ತಡೆಗೋಡೆ ನಿರ್ಮಾಣವಾಗಬೇಕಿದ್ದ ಪ್ರದೇಶದ ಸಹಿತ ಶೋಚನೀಯ ಸ್ಥಿತಿಯ ರಸ್ತೆಯನ್ನು ಕಂಡು ಅಲ್ಲಿನ ಪರಿಸರ ವಾಸಿಗಳೊಂದಿಗೆ ಮಾತುಕತೆ ನಡೆಸಿ ಕೂಡಲೇ ಇದಕ್ಕೊಂದು ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ವರುಷವಾಗುತ್ತಾ ಬಂದರು ಶಾಸಕರು ನೀಡಿದ ಭರವಸೆ ಮಾತ್ರ ಕನಸಾಗಿಯೆ ಉಳಿಯಿತು ಎನ್ನುತ್ತಾರೆ ಸ್ಥಳೀಯರು.

ಈಡೇರದ ಭರವಸೆ – ಜನರಿಂದ ಚುನಾವಣೆ ಭಹಿಷ್ಕಾರದ ನಿರ್ಧಾರ

ಹಲವಾರು ಮನವಿಗಳನ್ನು ನೀಡಿದರು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆಯ ದುರವಸ್ಥೆಯನ್ನು ಸರಪಡಿಸದ ಹಾಗೂ ಹೊಳೆ ಬದಿಗೆ ತಡೆಗೋಡೆ ನಿರ್ಮಿಸಲು ಮೀನಾಮೇಷ ಎಣಿಸುತ್ತಿರುವ ಶಾಸಕರ ಹಾಗೂ ಅದೀಕಾರ ವರ್ಗದ ನಡೆಯಿಂದ ಬೇಸರಗೊಂಡ ಈ ಭಾಗದ ಜನರು ಮುಂದಿನ ವಿಧಾನಸಭಾ ಚುನಾವಣೆಯನ್ನು ಭಹಿಷ್ಕರಿಸಲು ನಿರ್ದರಿಸಿದ್ದಾರೆ. ಇಲ್ಲಿನ ಪರಿಸರ ವಾಸಿಗಳು ಈ ಬಗ್ಗೆ ತುರ್ತು ಸಭೆ ಸೇರಿ ನೇರ್ಲಾಜೆ ನಿವಾಸಿ ಉದ್ಯಮಿ ದಿವಾಕರ ದಾಸ್ ರವರ ಮನೆಗೆ ತೆರಳಿ ಅವರೊಂದಿಗೆ ಚರ್ಚಿಸಿ ತಮ್ಮ ಅಳಲನ್ನು ತೋಡಿಕೊಂಡು, ತಮ್ಮಿಂದಾದ ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ದಿವಾಕರ್ ದಾಸ್ ರವರು ನಮ್ಮ ಊರಿಗೆ ನನ್ನಿಂದಾಗುವ ಸಹಕಾರ ನೀಡಲು ನಾನು ಸದಾ ಸಿದ್ದನಿದ್ದೇನೆ ಎಂದು ಭರವಸೆ ನೀಡಿದರು.

ಸೂಕ್ತ ಪರಿಹಾರಕ್ಕೆ ಪ್ರಯತ್ನಿಸಿ ನನ್ನಿಂದಾದ ಸಹಕಾರ ನೀಡುವೆ

ಈ ಭಾಗದ ರಸ್ತೆ ಸಮಸ್ಯೆ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳ ಸಹಿತ ಶಾಸಕರಿಗೆ ಮನವಿ ಮಾಡಲಾಗಿದೆ. ಆದರೂ ಅದರಿಂದ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಇದೀಗ ಸ್ಥಳೀಯರು ನನ್ನ ಬಳಿ ಬಂದು ಅವರ ಅಳಲನ್ನು ತೋಡಿಕೊಂಡಿದ್ದಾರೆ. ಮಾತ್ರವಲ್ಲದೆ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ಯೋಚನೆಯನ್ನು ಅವರು ಮಾಡಿದ್ದಾರೆ. ನಾನು ನನ್ನಿಂದಾಗುವ ಸಹಕಾರವನ್ನು ನೀಡುವುದಾಗಿ ಹಾಗೂ ಈ ಬಗ್ಗೆ ಸಂಬಂದ ಪಟ್ಟ ಇಲಾಖೆಯ ಸಹಿತ ಕೇಂದ್ರದ ಗಮನ ಸೆಳೆದು ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು

ದಿವಾಕರ ದಾಸ್ ನೇರ್ಲಾಜೆ
ಮಾಲಕರು ಎಸ್.ಎಲ್.ವಿ. ಗ್ರೂಪ್ಸ್

LEAVE A REPLY

Please enter your comment!
Please enter your name here