ಪುತ್ತೂರು : ದೇಶದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಆರ್‌ಬಿಐ ಬಿಡುಗಡೆ ಮಾಡಿದ ಗೋಲ್ಡ್ ಕಾಯಿನ್‌ಗಳ ಪೈಕಿ ಒಂದು ಕಾಯಿನ್‌ನ್ನು ಪರ್ಲಡ್ಕ ನಿವಾಸಿ ಸತೀಶ್ ನಾಯಕ್ ರವರು ಖರೀದಿಸಿದ್ದಾರೆ.
75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆರ್‌ಬಿಐ 600 ಗೋಲ್ಡ್ ಕಾಯಿನ್(ಅಪ್ಪಟ ಚಿನ್ನ 999) ಮುದ್ರಿಸಿ ಬಿಡುಗಡೆಗೊಳಿಸಿತ್ತು. ಇದರಲ್ಲಿ ಒಂದು ಕಾಯಿನ್‌ನ್ನು ಸತೀಶ್ ನಾಯ್ಕ್ ರವರು ಅದರ ಮೌಲ್ಯವನ್ನು ಕೊಟ್ಟು ಖರೀದಿಸಿ ಸಂಗ್ರಹ ಮಾಡಿಕೊಂಡಿದ್ದಾರೆ. ಒಂದು ಕಾಯಿನ್ 7.5ಗ್ರಾಂ. ಚಿನ್ನವನ್ನು ಹೊಂದಿದೆ. ಇವರು ಈ ಕಾಯಿನ್ ಖರೀದಿಸಿ ದ.ಕ.ಜಿಲ್ಲೆಯಲ್ಲಿಯೇ ಏಕೈಕ ವ್ಯಕ್ತಿ ಎನಿಸಿಕೊಂಡಿದ್ದಾರೆ. ಸತೀಶ್ ನಾಕ್‌ರವರ ಮನೆಯಲ್ಲಿ ಇಂತಹ ಹಲವು ವಿಶೇಷ ವಸ್ತುಗಳ ಸಂಗ್ರಹಾಲಯವೇ ಇದೆ. ಹಳೆಯ ಕರೆನ್ಸಿ, ಪ್ರಾಚ್ಯ ವಸ್ತುಗಳನ್ನು ಸಂಗ್ರಹ ಮಾಡುವ ಹವ್ಯಾಸವನ್ನು ಹೊಂದಿರುವ ಇವರು ಕೃಷಿಕರಾಗಿದ್ದಾರೆ.