ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ನಿಹಾಲ್‌ ರಾಜ್‌ ಗೆ ಬೆಳ್ಳಿಯ ಪದಕ

0

ಪುತ್ತೂರು :ಹರಿಯಾಣದ ಕುರು ಕ್ಷೇತ್ರದಲ್ಲಿ ನ. 19 ರಿಂದ 23 ರವರೆಗೆ ನಡೆಯುತ್ತಿರುವ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟದ ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್‌ ರಾಜ್‌ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇವರುಕಬಕದ ನಾಗರಾಜ್ ಹೆಗ್ಡೆ ಮತ್ತು ಭಾನುಮತಿ ದಂಪತಿ ಪುತ್ರ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್‌ ಇವರ ನೇತೃತ್ವದಲ್ಲಿ ಇವರು ತರಬೇತಿಯನ್ನು ಪಡೆದಿರುತ್ತಾನೆ. ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here