ವಿಟ್ಲ ಪಡ್ನೂರು ವ್ಯವಸಾಯ ಸಂಘದ ಕೋಡಪದವು ಶಾಖೆಯಲ್ಲಿ ಕಳವಿಗೆ ಯತ್ನ ವಿಫಲ

ವಿಟ್ಲ: ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಕೋಡಪದವು ಶಾಖೆಯಲ್ಲಿ ನ.22ರ ತಡರಾತ್ರಿ ಕಳವಿಗೆ  ಯತ್ನ ನಡೆಸಿ ವಿಫಲವಾದ ಬಗ್ಗೆ ವರದಿಯಾಗಿದೆ.

ಕಳ್ಳರು ಬ್ಯಾಂಕ್ ನ ಶಟರ್ ಅನ್ನು ಗ್ಯಾಸ್ ಕಟ್ಟರ್ ನಿಂದ ತುಂಡರಿಸಿ ಒಳನುಗ್ಗಲು ಪ್ರಯತ್ನ ನಡಸಿದರೂ ಅದು ವಿಫಲವಾಗಿದೆ. ಶಟರ್ ತೆರೆಯಲು ವಿಫಲರಾದ ಹಿನ್ನೆಲೆಯಲ್ಲಿ ಕಳ್ಳರಿಗೆ ಬ್ಯಾಂಕ್ ನ ಒಳನುಗ್ಗಲು ಅಸಾಧ್ಯವಾಗಿದೆ. ಸ್ಥಳೀಯ ವ್ಯಕ್ತಿಯೋರ್ವರು ಇದನ್ನು ಗಮನಿಸಿ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.