ಸಿರಿ ಕಡಮಜಲು ಕೃಷಿ ಕ್ಷೇತ್ರಕ್ಕೆ ನವ ದೆಹಲಿಯ ದಿವ್ಯ ಜ್ಯೋತಿ ಜಾಗೃತಿ ಸಂಸ್ಧಾನದ ಸಾದ್ವಿ ಮತ್ತು ಸಾಧಕರ ಸಂದರ್ಶನ

0

ಪುತ್ತೂರು: ಸಿರಿ ಕಡಮಜಲು ಕೃಷಿ ಕ್ಷೇತ್ರಕ್ಕೆ ನವಂಬರ್- 19 ಮತ್ತು 20 ರ ಎರಡು ದಿನಗಳ ಕೃಷಿ ಪ್ರವಾಸೋದ್ಯಮ ಕಾರ್ಯಕ್ರಮದ ಅಂಗವಾಗಿ ನವದೆಹಲಿಯ ದಿವ್ಯಜ್ಯೋತಿ ಜಾಗೃತಿ ಸಂಸ್ಧಾನದ 10 ಜನ ಸಾದ್ವಿಗಳು ಮತ್ತು ಸಾಧಕರು ಸಂದರ್ಶಿಸಿರುತ್ತಾರೆ.

ಧರ್ಮಕ್ಷೇತ್ರಗಳಾದ ಮೈಸೂರಿನ ಎಚ್.ಡಿ. ಕೋಟೆ, ಸುಬ್ರಹ್ಮಣ್ಯ, ಧರ್ಮಸ್ಧಳ, ಕದ್ರಿ, ಉಡುಪಿ, ಶೃಂಗೇರಿ ಮೊದಲಾದ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸಿ ಪುತ್ತೂರು ಶೀ ಮಹಾಲಿಂಗೇಶ್ವರ ದೇವಸ್ದಾನದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ತಂಡ ಕೃಷಿಕ್ಷೇತ್ರ ಸಂದರ್ಶನದ ಮೂಲ ಉದ್ದೇಶದಿಂದ ಸಿರಿ ಕಡಮಜಲು ಕೃಷಿ ಕ್ಷೇತ್ರಕ್ಕೆ ಸಂದರ್ಶನ ಮಾಡಿರುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವಂತೆ ಕೃಷಿ ಕ್ಷೇತ್ರದಲ್ಲಿ ಕೂಡ ಭೂ ದೇವಿಯ ಆರಾಧನೆ ನಡೆಯುತ್ತದೆ. ಅದರ ಫಲವಾಗಿ ಹಸಿದ ಹೊಟ್ಟೆಗೆ ಅನ್ನ ಮತ್ತು ಹಲವಾರು ದುಡಿಯುವ ಕೈಗಳಿಗೆ ಕೆಲಸ ಸಿಗುತ್ತದೆ. ಇದರಿಂದಾಗಿ ದೇಶದ ಸಿರಿಧಾನ್ಯ ಸಂಪತ್ತು ವೃದ್ಧಿಯಾಗಿ ದೇಶ ಸುಭೀಕ್ಷೆಯಿಂದ ಬಾಳುವಂತಾಗುತ್ತದೆ ಎಂದು ಧಾರ್ಮಿಕವಾಗಿ ನುಡಿದು ಭಾರತೀಯ ಕೃಷಿ ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಚಿಂತನ ಮಂಥನ ನಡೆಸಬೇಕಾಗಿದೆ ಎಂದರು. ತಂಡದಲ್ಲಿ ದೆಹಲಿಯ ದಿವ್ಯಜೋತಿ ಜಾಗೃತಿ ಸಂಸ್ಧಾನದ ಸಾದ್ವಿ ದೀಪ ಭಾರತಿ, ಸಾದ್ವಿ ಉನ್‌ಮೇಶ್ ಭಾರತಿ, ಸಾದ್ವಿ ನಿಶಾಂಕ ಭಾರತಿ , ಸಾದ್ವಿ ಗೀತಾಜಂಲಿ, ಸಾಧಕರಾದ ಅಕ್ಷಯ್, ನಿಮಿಷ ಕಪಿಲ್ ಮೊದಲಾದವರು ಇದ್ದರು.

ಇವರೆಲ್ಲರನ್ನು ಕಡಮಜಲು ಸುಭಾಸ್ ರೈ ಮತ್ತು ಪ್ರೀತಿ ಎಸ್. ರೈ ಸ್ವಾಗತಿಸಿ, ಊಟೋಪಚಾರ ನೀಡಿ ಗೌರವಿಸಿದರು. ತಮ್ಮ ಆಗಮನದಿಂದ ಕ್ಷೇತ್ರದ ಮೌಲ್ಯ ವರ್ಧನೆಯಾಗಿದೆ. ನಮಗೆ ಹೆಚ್ಚಿನ ಕೆಲಸ ಕಾರ್ಯ ಮಾಡಲು ಆತ್ಮಸ್ಥೈರ್ಯ ತುಂಬಿದೆ ಎಂದು ಹೇಳಿದ ಸುಭಾಸ್ ರೈಯವರು ಸಾಧಕರನ್ನು ಅಭಿನಂದಿಸಿ ಶ್ಲಾಘಿಸಿದರು.

ಸುದ್ದಿ ಬಳಗದ ಸಂಪಾದಕರಾದ ಡಾ. ಯು. ಪಿ. ಶಿವಾನಂದರ ಆಶಯದ ಅಂಗವಾಗಿ ಕೃಷಿ ಪ್ರವಾಸೋದ್ಯಮ ಹೆಚ್ಚಿನ ಮುತುವರ್ಜಿಯಿಂದ ನಡೆದು ಕೃಷಿ ಕ್ಷೇತ್ರಕ್ಕೂ ಧಾರ್ಮಿಕ ಕ್ಷೇತ್ರದ ನೆಲೆಗಟ್ಟು ದೊರೆಯುವಂತಾಗಿದೆ.

ಕಡಮಜಲು ಸುಭಾಸ್ ರೈ

LEAVE A REPLY

Please enter your comment!
Please enter your name here