2023ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರಕಾರ

0

ಬೆಂಗಳೂರು:ರಾಜ್ಯ ಸರಕಾರವು 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಿದೆ.


ಜ.26-ಗಣರಾಜ್ಯೋತ್ಸವ, ಫೆ-.18-ಮಹಾಶಿವರಾತ್ರಿ,ಮಾ.22-ಯುಗಾದಿ ಹಬ್ಬ, ಎ.3-ಮಹಾವೀರ ಜಯಂತಿ, ಎ.7-ಗುಡ್ ಫ್ರೈಡೆ, ಎ.14-ಡಾ|ಬಿ.ಆರ್.ಅಂಬೇಡ್ಕರ್ ಜಯಂತಿ, ಮೇ1-ಕಾರ್ಮಿಕರ ದಿನಾಚರಣೆ, ಜೂ.29-ಬಕ್ರೀದ್, ಜು.29-ಮೊಹರಂ ಕಡೇ ದಿನ, ಆ.15-ಸ್ವಾತಂತ್ರ‍್ಯ ದಿನಾಚರಣೆ, ಸೆ.18-ವರಸಿದ್ಧಿ ವಿನಾಯಕ ವೃತ, ಸೆ.28-ಈದ್-ಮಿಲಾದ್, ಅ.2-ಗಾಂಧಿ ಜಯಂತಿ, ಅ,23- ಮಹಾನವಮಿ, ಆಯುಧಪೂಜೆ, ಅ.24-ವಿಜಯದಶಮಿ, ನ.1-ಕನ್ನಡ ರಾಜ್ಯೋತ್ಸವ, ನ.14- ಬಲಿಪಾಡ್ಯಮಿ, ದೀಪಾವಳಿ, ನ.30-ಕನಕ ಜಯಂತಿ, ದ.25-ಕ್ರಿಸ್ ಮಸ್.

ಈ ರಜಾ ಪಟ್ಟಿಯಲ್ಲಿ ರವಿವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ(ಜ.15), ಬಸವ ಜಯಂತಿ/ಅಕ್ಷಯ ತೃತೀಯ (ಎ.23) ಮತ್ತು ನರಕ ಚತುರ್ದಶಿ (ನ.12) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮಾವಾಸ್ಯೆ (ಅ.14) ಹಾಗೂ ನಾಲ್ಕನೇ ಶನಿವಾರದಂದು ಬರುವ ಈದುಲ್ ಫಿತ್ರ್(ರಮಝಾನ್) (ಎ.22) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ(ಅ.28) ನಮೂದಿಸಲಾಗಿಲ್ಲ.

LEAVE A REPLY

Please enter your comment!
Please enter your name here