ವಿದ್ಯಾಮಾತಾ ಅಕಾಡೆಮಿ ವತಿಯಿಂದ ಆಯೋಜನೆ…
ಹತ್ತೇ ಹತ್ತು ದಿನದಲ್ಲಿ 2000 ಮಿಕ್ಕಿ ಆಭ್ಯರ್ಥಿಗಳಿಂದ ನೋಂದಾವಣೆ
ಪುತ್ತೂರು : ವಿದ್ಯಾಮಾತಾ ಫೌಂಡೇಶನ್ ವತಿಯಿಂದ ಪುತ್ತೂರಿನಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ರಾಜ್ಯಮಟ್ಟದ ಉದ್ಯೋಗ ಮೇಳಕ್ಕೆ ನೋಂದಾವಣೆ ಆರಂಭಗೊಂಡಿದ್ದು, ಬರೀ 10 ದಿನಗಳಲ್ಲೇ 2ಸಾವಿರಕ್ಕೂ ಮಿಕ್ಕಿ ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರು ನೋಂದಾವಣೆ ಮಾಡಿಕೊಂಡಿದ್ದಾರೆ.
ಮೊಬೈಲ್ ಸಂಖ್ಯೆ 9772294246 ಮಿಸ್ ಕಾಲ್ ಕೊಡೋ ಮೂಲಕ ನೋಂದಾವಣೆ ಪ್ರಾರಂಭವಾಗಿದ್ದು, ಆಸಕ್ತರು ಈ ಮೇಲಿನ ನಂಬರಿಗೆ ಮಿಸ್ ಕಾಲ್ ಕೊಡುವುದರ ಮೂಲಕ ತಮ್ಮ ಹೆಸರನ್ನು ನೋಂದಾಯಿಸಲು ಇನ್ನೂ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ನೋಂದಾವಣೆ ಮಾಡಿರುವಂಥ ಆಭ್ಯರ್ಥಿಗಳಿಗೆ 10 ದಿನದ ಒಳಗಾಗಿ ವಿದ್ಯಾಮಾತಾ ಫೌಂಡೇಶನ್ ವತಿಯಿಂದ ಕರೆ ಮೂಲಕ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುವುದು.
ಉದ್ಯೋಗ ಮೇಳದಲ್ಲಿ ನೂರಕ್ಕೂ ಹೆಚ್ಚಿನ ವಿವಿಧ ಕ್ಷೇತ್ರದ ಕಂಪನಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್.ಸಿ ಯಿಂದ ಐ.ಟಿ.ಐ., ಪಿ.ಯು.ಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಮುಗಿಸಿರುವ ಅಥವಾ ಸದ್ಯ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಮುಕ್ತವಾಗಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದ್ದು, ಉದ್ಯೋಗ ಮೇಳವು ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಸುದಾನ ವಸತಿಯುತ ಶಾಲೆಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಉದ್ಯೋಗ ಮೇಳದ ದಿನಾಂಕವನ್ನು ನೋಂದಾವಣೆ ಮಾಡಿದ ವಿದ್ಯಾರ್ಥಿಗಳಿಗೆ 10 ದಿನದ ಮುಂಚಿತವಾಗಿ ತಿಳಿಸಲಾಗುವುದು ಮತ್ತು ಉದ್ಯೋಗ ನೇರ ಸಂದರ್ಶನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಸಲಾಗುವುದೆಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
2017 ಹಾಗೂ 2019ರ ಸಾಲಿನಲ್ಲಿ ವಿದ್ಯಾಮಾತಾ ಫೌಂಡೇಶನ್’ ನ ವತಿಯಿಂದ ನಡೆದಿದ್ದ ಉದ್ಯೋಗ ಮೇಳದಲ್ಲಿ 10ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು ಹಾಗೂ ದಾಖಲೆಯ ಪ್ರಮಾಣದಲ್ಲಿ ಸ್ಥಳದಲ್ಲಿಯೇ ಸುಮಾರು 2ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೇಮಕಾತಿಯಾಗಿದ್ದನ್ನು ಸ್ಮರಿಸಿಕೊಳ್ಳಬಹುದು. ಎರಡು ಉದ್ಯೋಗ ಮೇಳಗಳಲ್ಲಿ ಆಯ್ಕೆಯಾಗಿದ್ದ 40ಕ್ಕೂ ಹೆಚ್ಚಿನ ಆಕಾಂಕ್ಷಿಗಳು ಸದ್ಯ ಅಂತಾರಾಷ್ಟ್ರೀಯ/ರಾಷ್ಟ್ರೀಯ ಕಂಪನಿಗಳ ಉನ್ನತ ಹುದ್ದೆಯಲ್ಲಿ ಇರುವುದು ವಿದ್ಯಾಮಾತಾ ಫೌಂಡೇಶನ್ ನಡೆಸಿದ್ದ ಉದ್ಯೋಗಮೇಳಗಳ ಯಶಸ್ಸಿಗೆ ಸಾಕ್ಷಿಯಾಗಿದೆ.
ಈ ವರ್ಷವೂ 8ಸಾವಿರಕ್ಕೂ ಮಿಕ್ಕಿದ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದ್ದು ವಿದ್ಯಾಮಾತಾ ಫೌಂಡೇಶನ್ ಜನಪ್ರತಿನಿಧಿಗಳ, ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲು ಉದ್ದೇಶಿಸಿದೆ.