ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನ ವಾರ್ಷಿಕ ಮಹೋತ್ಸವ

0

ಹೃದಯವಂತ ಮನುಷ್ಯರಾಗಿ ಬದುಕುವುದೇ ಜೀವನದ ಸತ್ಯವಾಗಿದೆ-ವಂ|ಲಾರೆನ್ಸ್ ಮಸ್ಕರೇನ್ಹಸ್

ಪುತ್ತೂರು:ದೇವರು ಸತ್ಯದ, ನೀತಿಯ ಪಾಠವನ್ನು ನಮಗೆ ಬೋಧಿಸುವುದರ ಜೊತೆಗೆ ನಮ್ಮಲ್ಲಿ ಸೇವಾ ಮನೋಭಾವ, ದಯೆ, ಕ್ಷಮಾಪಣಾಗುಣ, ತ್ಯಾಗ, ನಿಸ್ವಾರ್ಥತೆ, ಪರಸ್ಪರ ಆದರಿಸುವ ಗುಣಗಳು ಮನೆಮಾಡಿದಾಗ ನಮ್ಮ ಕುಟುಂಬ, ಚರ್ಚ್ ಹಾಗೂ ಸಮುದಾಯವು ಪಾವಿತ್ರ್ಯತೆಯನ್ನು ಹೊಂದುವಂತಾಗುತ್ತದೆ ಎಂದು ಪುತ್ತೂರು ವಲಯ ಚರ್ಚ್‌ಗಳ ಪ್ರಧಾನ ಧರ್ಮಗುರು ಹಾಗೂ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾಗಿರುವ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹೇಳಿದರು.

ಅವರು ನ.23 ರಂದು ನಗರದ ಹೊರ ವಲಯದಲ್ಲಿರುವ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಧರ್ಮಕ್ಷೇತ್ರದ ವಾರ್ಷಿಕ ಹಬ್ಬ(ಸಾಂತ್‌ಮಾರಿ)ದ ಪ್ರಯುಕ್ತ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಬೈಬಲ್‌ನ ಮೇಲೆ ಸಂದೇಶ ನೀಡಿದರು.

ಮನುಷ್ಯ ತನ್ನ ಜನನದಿಂದ ಹಿಡಿದು ಮರಣದವರೆಗೆ ಕಲಿಯಲು ಬಹಳಷ್ಟಿದೆ. ದೇವರ ರಾಜ್ಯದಲ್ಲಿ ದೇವರ ಮೇಲೆ ನಂಬಿಕೆ ಹಾಗೂ ಭರವಸೆಯನ್ನಿಟ್ಟು ಜೀವನ ಸಾಗಿಸಿದಾಗ ಸಂತೋಷ ಹಾಗೂ ನೆಮ್ಮದಿ ಪ್ರಾಪ್ತವಾಗುವುದು. ಚರ್ಚ್‌ಗೆ ಆಗಮಿಸುವ ಭಕ್ತಾಧಿಗಳಲ್ಲಿ ಮೇಲು-ಕೀಳು ಎಂಬ ಭಾವನೆಯಿಲ್ಲ. ದೇವರ ಆರಾಧ್ಯ ಸ್ಥಳಗಳಲ್ಲಿ ಎಲ್ಲರೂ ಸಮಾನರೇ. ಕ್ರೈಸ್ತ ಪವಿತ್ರ ಸಭೆಯು ಯೇಸುಕ್ರಿಸ್ತರ ಆಧ್ಯಾತ್ಮಿಕ ದೇಹದ ಒಂದು ಅಂಗವಾಗಿ ಹಬ್ಬದ ಆಚರಣೆಯನ್ನು ಆಚರಿಸುತ್ತಿದೆ. ನಮ್ಮಲ್ಲಿನ ವಿಷಯಗಳನ್ನು ಪರಸ್ಪರ ಹಂಚಿಕೊಂಡು ಜ್ಞಾನವನ್ನು ವೃದ್ಧಿಸುವ ಮನೋಭಾವ ನಾವು ಹೊಂದಿರಬೇಕು ಎಂದ ಅವರು ಪ್ರಭು ಯೇಸುಕ್ರಿಸ್ತರ ಉದಾರತೆಯ, ವಿಧೇಯತೆಯ, ಏಕತೆಯ ಮನೋಭಾವದ ಉದಾತ್ತ ಗುಣಗಳನ್ನು ಮಾನವ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಕ್ರೈಸ್ತ ಪವಿತ್ರಸಭೆಯ ಏಳಿಗೆಗೆ ದುಡಿಯೋಣ ಎಂದು ಅವರು ಹೇಳಿದರು.

ಧರ್ಮಗುರುಗಳಾದ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ವಂ|ಅಬೆಲ್ ಲೋಬೋ, ಬನ್ನೂರು ಸಂತ ಅಂತೋನಿ ಚರ್ಚ್‌ನ ವಂ|ಪ್ರಶಾಂತ್ ಫೆರ್ನಾಂಡೀಸ್, ಸುಳ್ಯ ಚರ್ಚ್‌ನ ವಂ|ವಿಕ್ಟರ್ ಡಿ’ಸೋಜ, ನಿಡ್ಪಳ್ಳಿ ಚರ್ಚ್‌ನ ಜೇಸನ್ ಲೋಬೊ, ಪಾಲೋಟಾಯ್ನ್ ಸಂಸ್ಥೆಯ ವಂ|ವಿಕ್ಟರ್ ಮಾರ್ಟಿಸ್, ಮರೀಲು ಚರ್ಚ್ ಹಿಂದಿನ ಧರ್ಮಗುರು ವಂ|ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡ, ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ವಂ|ವಿವೇಕ್ ದೀಪಕ್ ಪಿಂಟೋ, ಕುಲಶೇಖರ ಚರ್ಚ್ ಸಹಾಯಕ ಧರ್ಮಗುರು ವಂ|ಜೋವಿನ್ ಸಿಕ್ವೇರಾ, ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಕಾರ್ಯದರ್ಶಿ ವಂ|ಶರೂನ್ ಸಜಿ(ಜೋನ್), ಧರ್ಮಗುರು ವಂ|ಸೆಬಾಸ್ಟಿಯನ್, ಮುಕ್ರಂಪಾಡಿ ಸಾಂತೋಮ್ ಗುರುಮಂದಿರದ ರೆಕ್ಟರ್ ವಂ|ಸನ್ನಿ ಮ್ಯಾಥ್ಯೂ, ವೈಸ್ ರೆಕ್ಟರ್ ವಂ|ಕ್ರಿಸ್ಟಿ, ನೆಲ್ಯಾಡಿ ಚರ್ಚ್‌ನ ವಂ|ವಿನ್ಸೆಂಟ್ ಡಿ’ಸೋಜ, ಪರ್ಲ ಚರ್ಚ್‌ನ ವಂ|ಪ್ರಕಾಶ್ ಪಿರೇರಾ, ಮಿಲಾರ್ ಚರ್ಚ್ ಸಹಾಯಕ ಧರ್ಮಗುರು ವಂ|ಐವನ್ ಡಿ’ಸೋಜ, ಕೊಕ್ಕಡ ಚರ್ಚ್‌ನ ವಂ|ಜಗದೀಶ್ ಪಿಂಟೋ, ಪಂಜ ಚರ್ಚ್‌ನ ವಂ|ಅಮಿತ್ ರೊಡ್ರಿಗಸ್, ಸಂಪಾಜೆ ಚರ್ಚ್‌ನ ವಂ|ಪಾವ್ಲ್ ಕ್ರಾಸ್ತಾ ಸೇರಿದಂತೆ 18 ಮಂದಿ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ನೂರಾರು ಭಕ್ತಾದಿಗಳೊಂದಿಗೆ ದಿವ್ಯ ಪೂಜೆಯನ್ನು ಅರ್ಪಿಸಲಾಯಿತು.

ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಸಿರಿಲ್ ರೊಡ್ರಿಗಸ್, ಕಾರ್ಯದರ್ಶಿ ನ್ಯಾನ್ಸಿ ಮಾಡ್ತಾ, 11ವಾಳೆ ಗುರಿಕಾರರು, ಚರ್ಚ್ ಪಾಲನಾ ಸಮಿತಿ ಸದಸ್ಯರು, ಸಂತ ವಿನ್ಸೆಟ್ ದೇ ಪಾವ್ಲ್ ಸಭಾ, ಐಸಿವೈಎಂ, ವೈಸಿಎಸ್, ಮರಿಯಾಳ್ ಸೊಡ್ಯಾಲಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ವೇದಿ ಸೇವಕರು, ಗಾಯನ ಮಂಡಳಿ ದಿವ್ಯ ಬಲಿಪೂಜೆಯಲ್ಲಿ ಸಹಕರಿಸಿದರು. ಸಾವಿರಾರು ಭಕ್ತಾಧಿಗಳು ದಿವ್ಯ ಬಲಿಪೂಜೆಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.

ಪವಿತ್ರ ಮೋಂಬತ್ತಿ ವಿತರಣೆ…
ಪುತ್ತೂರು ವಲಯ ಚರ್ಚ್‌ಗಳ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹಬ್ಬಕ್ಕೆ ವಸ್ತು ರೂಪದಲ್ಲಿ ಹಾಗೂ ಹಣದ ರೂದಲ್ಲಿ ಸಹಕಾರವಿತ್ತ ದಾನಿಗಳಿಗೆ ಪವಿತ್ರೀಕರಿಸಿದ ಮೊಂಬತ್ತಿ ವಿತರಿಸಿದರು. ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್‌ರವರು ದಾನಿಗಳ ಹೆಸರನ್ನು ಓದಿದರು ಮತ್ತು ಹಬ್ಬಕ್ಕೆ ಸಹಕಾರವಿತ್ತವರಿಗೆ ಕೃತಜ್ಞತೆ ಸಲ್ಲಿಸಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ…
ಹಬ್ಬದ ದಿವ್ಯ ಬಲಿಪೂಜೆ ಬಳಿಕ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಚರ್ಚ್‌ಗೆ ಭೇಟಿ ನೀಡಿ ಚರ್ಚ್ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್‌ರವರಿಗೆ ಹಸ್ತಲಾಘವ ನೀಡಿ ಹಬ್ಬಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಸಿರಿಲ್ ರೊಡ್ರಿಗಸ್, ಪ್ರಮುಖರಾದ ಮನಮೋಹನ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here