ಕೋಡಿಂಬಾಡಿ‌ ಕಜೆ ಅಂಗನವಾಡಿ ಕೇಂದ್ರದಲ್ಲಿ ಕ್ರೀಡಾಕೂಟ

0

ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುತ್ತೂರು, ಅಂಗನವಾಡಿ ಬಾಲವಿಕಾಸ ಸಮಿತಿ, ಸ್ತ್ರೀಶಕ್ತಿ ಸ್ವಸಹಾಯ ಸಂಘ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಪೋಷಕರು ಕೋಡಿಂಬಾಡಿ ಕಜೆ ಅಂಗನವಾಡಿ‌ ಕೇಂದ್ರ ಇದರ ಆಶ್ರಯದಲ್ಲಿ ನ. 27ರಂದು ನಡೆಯುವ ಬಾಲಮೇಳ ಮತ್ತು ಸ್ತ್ರೀ ಶಕ್ತಿ ಸಂಘಗಳ ವಾರ್ಷಿಕೋತ್ಸವದ ಪ್ರಯುಕ್ತ ಸ್ಥಳೀಯರಿಗೆ ಕ್ರೀಡಾಕೂಟ ನ. 20ರಂದು ನಡೆಯಿತು.

ಅಂಗನವಾಡಿ ಕೇಂದ್ರದ ಪುಟಾಣಿಗಳ ಪ್ರಾರ್ಥನೆಯೊಂದಿಗೆ‌ ಆರಂಭವಾದ ಕ್ರೀಡಾಕೂಟ ವನ್ನು ಅಂಗನವಾಡಿ ಬಾಲವಿಕಾಸ ಸಮಿತಿ ಮಾಜಿ ಅಧ್ಯಕ್ಷ ಶೇಷಪ್ಪ ಪೂಜಾರಿ ನಿಡ್ಯ ಉದ್ಘಾಟಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ನಿಡ್ಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಾಲವಿಕಾಸ ಸಮಿತಿ ಸದಸ್ಯ ಕೇಶವ ಭಂಡಾರಿ ಕೈಪ, ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲಾ ಎಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ್ ಪೂಜಾರಿ ಜೇಡರಪಾಲು, ಬೀರಿಗ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅರುಣಾ ಭಾಗವಹಿಸಿದ್ದರು. ವೇದಿಕೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಅಧ್ಯಕ್ಷೆ ಉಷಾ ಮುಖೇಶ್, ಶಾರದಾ ಚಂದ್ರಹಾಸ ರೈ, ಹಿರಿಯ ವಿದ್ಯಾರ್ಥಿ ಸಂಘದ ನಾಯಕ ಜಗದೀಶ ಕಜೆ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಯಶೋದ ಬಾರ್ತಿಕುಮೇರು ಕಾರ್ಯಕ್ರಮ ನಿರೂಪಿಸಿದರು. ಕಿಶೋರಿ ಸಂಘದ ನಾಯಕಿ ಕವಿತ ಕೈಪ, ಶುಭ, ತುಳಸಿ, ಶ್ರೀನಿಧಿ, ಸುಶೀಲ ಕೈಪ, ವಾರಿಜಾ, ಸುಂದರಿ, ಪುಷ್ಪಾ, ಕೃಷ್ಣಪ್ಪ ಮತ್ತು ಮೋಹಿನಿ ಅತಿಥಿಗಳನ್ನು ಗೌರವಿಸಿದರು. ಆಟೋಟ ಸ್ಪರ್ಧೆಯನ್ನು ದೈಹಿಕ ಶಿಕ್ಷಣ ನಿರ್ದೇಶಕ ಯತೀಶ್ ಗೌಡ ಬಾರ್ತಿಕುಮೇರು ನಡೆಸಿಕೊಟ್ಟರು, ಸುಂದರ ಕಜೆ, ಪವಿತ್ರ, ಸತೀಶ್ ಮೊಗಪ್ಪು ಸಹಕರಿಸಿದರು.

LEAVE A REPLY

Please enter your comment!
Please enter your name here