ಸಂತ ಫಿಲೋಮಿನಾ ಪ್ರೌಢ ಶಾಲೆಯಲ್ಲಿ ರಾಜ್ಯಮಟ್ಟದ ಚಿತ್ರಕಲಾ ಗ್ರೇಡ್ ಪರೀಕ್ಷೆಗಳು ಆರಂಭ

0

12 ಶಾಲೆಗಳಿಂದ 338 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

ಪುತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿಯ 2022-23 ನೇ ಸಾಲಿನ ರಾಜ್ಯಮಟ್ಟದ ಮೂರು ದಿನಗಳು ನಡೆಯುವ ಚಿತ್ರಕಲಾ ಗ್ರೇಡ್ ಪರೀಕ್ಷೆಗಳು ನ.23 ರಂದು ಆರಂಭಗೊಂಡಿದೆ. ಪುತ್ತೂರಿಗೆ ಸಂಬಂಧಿಸಿ ಪರೀಕ್ಷಾ ಕೇಂದ್ರವಾದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಚಿತ್ರಕಲಾ ಪರೀಕ್ಷೆ ನಡೆಯುತ್ತಿದೆ.

ಚಿತ್ರಕಲಾ ಗ್ರೇಡ್ ಪರೀಕ್ಷೆಗಳಲ್ಲಿ ಲೋಯರ್ ಮತ್ತು ಹೈಯರ್ ಗ್ರೇಡ್ ವಿಭಾಗಕ್ಕೆ ಸಂಬಂಧಿಸಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ 12 ಶಾಲೆಗಳಿಂದ 338 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

ಒಟ್ಟು ಆರು ಪಠ್ಯಗಳಿಗೆ ಸಂಬಂಧಿಸಿ ನಡೆಯುವ ಪರೀಕ್ಷೆಯಲ್ಲಿ ಮೊದಲ ದಿನ ವಸ್ತು ಮತ್ತು ಸ್ಮರಣ ಚಿತ್ರ, ನ.24 ರಂದು ಪ್ರಕೃತಿ, ಅಕ್ಷರ ಬರವಣಗೆ, ನ.25 ರಂದು ನಕ್ಷೆ ಮತ್ತು ಸರಳ ಕೈ ಚಿತ್ರಗಳ ಪರೀಕ್ಷೆ ನಡೆಯಲಿದೆ. ಪುತ್ತೂರು ಫಿಲೋಮಿನಾ ಪ್ರೌಢಶಾಲೆಯಲ್ಲಿ ಸಮಾರು  40 ವರ್ಷಗಳಿಂದ ಚಿತ್ರಕಲಾ ಗ್ರೇಡ್ ಪರೀಕ್ಷೆ ನಡೆಯುತ್ತಿದೆ.

ತಾಳ್ಮೆ, ಏಕಾಗ್ರತೆಗೆ ಚಿತ್ರಕಲೆ ಅಗತ್ಯ
ಚಿತ್ರ ಇಲ್ಲದೆ ಯಾವುದೇ ವಿಚಾರ ಇಲ್ಲ. ಅದು ವಿಶ್ವದ ಬಾಷೆಯಾಗಿದೆ. ಇದರಿಂದ ತಾಳ್ಮೆ, ಏಕಾಗ್ರತೆ, ಹೊಸತನ ಬೆಳೆಯುತ್ತದೆ. ಹೈಯತ್, ಲೋಯರ್ ಗ್ರೇಡ್ ಪರೀಕ್ಷೆ ಬಳಿಕ ಮುಂದೆ ಡಿಪ್ಲೋಮೊ, ಎಫ್‌ಎಮ್‌ಎ ಮಾಡಬಹುದು. ಚಿತ್ರಕಲೆಯಲ್ಲಿ ಪರಿಣಿತರಾದವರು ಇಂಜಿನಿಯರ್, ವೈದ್ಯಕೀಯ ಕ್ಷೇತ್ರ ಸೆರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು.
ಪುರುಷೋತ್ತಮ ಎಂ, ನಿವೃತ್ತ ಚಿತ್ರಕಲಾ ಶಿಕ್ಷಕರು
ಸಂತ ಫಿಲೋಮಿನಾ ಪ್ರೌಢಶಾಲೆ ಪುತ್ತೂರು

LEAVE A REPLY

Please enter your comment!
Please enter your name here