ಕಾಣೆಯೂರು : ಗ್ರಾಮೀಣ ಪ್ರದೇಶವಾದರೂ ಕಾಣೆಯೂರಿನ ಪ್ರಗತಿ ವಿದ್ಯಾಸಂಸ್ಥೆಯು ಅನೇಕ ಸಾಧಕ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದೆ. ಕ್ರೀಡೆಯು ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ನೀಡಿ ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಬ್ಬೆಕೇರಿಯ ಶಿಕ್ಷಕರಾದ ಜನಾರ್ಧನ ಹೇಮಳ ಅವರು ಹೇಳಿದರು.
ಅವರು ಪ್ರಗತಿ ವಿದ್ಯಾ ಸಂಸ್ಥೆಯ ವಾರ್ಷಿಕ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ಮಾಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಮಾತನಾಡುತ್ತಾ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ತಮ್ಮ ಪ್ರತಿಭೆಯನ್ನು ತೋರುವುದಲ್ಲದೆ ಸಹಕಾರ, ಒಗ್ಗಟ್ಟು , ಪ್ರೀತಿ ,ವಿಶ್ವಾಸ ಇವುಗಳನ್ನು ತಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು .
ಚಾರ್ವಾಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷಧನಂಜಯ ಕೇ ನಾಜೆ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಜ್ಞಾನೇಶ್ವರಿ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರು ಸರಸ್ವತಿ ಎಂ, ಅನಿತಾ ಜೆ. ರೈ ಶುಭ ಹಾರೈಸಿದರು, ವಿನಯ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕಾರ್ಯದರ್ಶಿ ಜಿತೇಶ್ ಸಿ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸಾಧಕ ವಿದ್ಯಾರ್ಥಿಗಳಾದ ಶ್ರವಣ್ ಜೆ ಎಚ್ ,ಸೃಜನ್ ರೈ, ಸನ್ಮಿತ್ ರೈ, ನಂದನ್, ಉತ್ತಮ್ ಜಿ , ಸಮರ್ಥ್ ಪಿ , ಕೀರ್ತನ್ ರೈ, ಶ್ರಾವ್ಯ ಕೆ ಎಚ್ , ಸ್ವಸ್ತಿಕ ರೈ , ಶಿಲ್ಪ , ಸಾನ್ವಿಕ, ಶ್ರಾವ್ಯ ರೈ, ವೈಶಾಲಿ ,ಕೃಪಾ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿ ಅತಿಥಿಗಳಿಗೆ ಜ್ಯೋತಿಯನ್ನು ಹಸ್ತಾಂತರಿಸಿದರು.