ವಿಹಾರ ನೌಕಾಯಾನ ಉದ್ಯೋಗ ಮಾಹಿತಿ , ತರಬೇತಿ ಸಂಸ್ಥೆ “ಫಿನಿಕ್ಸ್ ಮೆರೈನ್ ” ಶುಭಾರಂಭ

0

ಪುತ್ತೂರು : ಹೆಸರಾಂತ ವಿಹಾರ ನೌಕಾಯಾನ(cruise ship jobs)ಸಂಸ್ಥೆ ಗಳಲ್ಲಿರುವ ಉದ್ಯೋಗಗಳ ಬಗ್ಗೆ ಮಾಹಿತಿ ಹಾಗೂ ಅಗತ್ಯ ತರಬೇತಿ ಜೊತೆಗೆ ಉದ್ಯೋಗವನ್ನು ಒದಗಿಸಿ ಕೊಡುವ ಸಲುವಾಗಿ ,ಮುಕ್ರಂಪಾಡಿ ಶೋನ್ ಜೋಯ್ ಮಾಲೀಕತ್ವದ ” ಫೀನಿಕ್ಸ್ ಮೆರೈನ್ ” ನ.24 ರಂದು ದರ್ಬೆ ಮುಖ್ಯರಸ್ತೆ ಬುಶ್ರಾ ಟವರ್ಸ್ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿತು.

ಪುತ್ತೂರು ನಗರಸಭಾ ಆಯುಕ್ತರಾದ ಮಧು ಎಸ್ ಮನೋಹರ್ ರಿಬ್ಬನ್ ಕತ್ತರಿಸುವ ಮೂಲಕ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹರಸಿ ,ಅಭಿನಂದಿಸಿದರು. ಮುಕ್ರಂಪಾಡಿ ಸಾಂತೋಮ್ ಗುರುಮಂದಿರದ ಧರ್ಮಗುರು ಸನ್ನಿ ಅಲಪ್ಪಟ್ ಶುಭ ಆಶೀರ್ವಚನ ನೀಡಿ ,ಪವಿತ್ರ ಜಲ ಚಿಮುಕಿಸಿದರು. ಈ  ವೇಳೆ ನಗರಸಭಾ ಸದಸ್ಯ ಯೂಸುಫ್ ಡ್ರೀಮ್ಸ್ ,ನಗರಸಭಾ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತ ಕಿರಣ್ , ಮಾಲಕರ ಹೆತ್ತವರು ಜೋಯ್ ಪಿ.ಎ.ಹಾಗೂ ಬಿಂದು ಜೋಯ್ ಮತ್ತಿತರರು ಹಾಜರಿದ್ದರು.

RemasterDirector_5122f8b34

ಶಾನ್ ಜೋಯ್ ಮಾತನಾಡಿ , ನರ್ಸ್ , ಎಂಜಿನಿಯರಿಂಗ್, ಅಡ್ಮಿನಿಸ್ಟ್ರೇಷನ್ ,ಜಿಮ್ ಟ್ರೈನರ್ , ಸೆಕ್ಯೂರಿಟಿ ಆಫೀಸರ್ , ಫೋಟೋಗ್ರಾಫರ್, ಆರ್ಟ್ ಗ್ಯಾಲರಿ , ಎಂಟರ್ಟೈನ್ಮೆಂಟ್ ಮ್ಯಾನೇಜರ್ , ರೆಸ್ಟೋರೆಂಟ್ ಅಂಡ್ ಸ್ಪಾ, ಸ್ಟೋರ್ ಕೀಪರ್,ಕ್ಯಾಸಿನೋ ,ಎಬಿ ,ಒಎಸ್,ವೈಪರ್ , ಹೋಟೆಲ್ ಮ್ಯಾನೇಜ್ಮೆಂಟ್ ,ಗ್ಯಾಲೇ ಯುಟಿಲಿಟಿ ,ಶೆಫ್ ,ಕೊಮ್ಮಿ ,ಎಫ್ ಆ್ಯಂಡ್ ಬಿ ,ಲಾಂಡ್ರಿ ಅಟೆಂಡೆಂಟ್ , ಹೌಸ್ ಕೀಪಿಂಗ್ ಹಾಗೂ ಕಿಚನ್ ಸ್ಟೀವಾರ್ಡ್ ಹುದ್ದೆಗಳು ಈಗಾಗಲೇ ಲಭ್ಯವಿದ್ದು , ಎಸ್ಎಸ್ಎಲ್ಸಿ ಅಥವಾ ಪಿಯುಸಿ ಆದ ಜೊತೆಗೆ ಆಂಗ್ಲ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲ ಜೊತೆಗೆ ಅನುಭವಿಗಳಿಗೆ ಆದ್ಯತೆ ಇದೆಯೆಂದು ಹೇಳಿ ಸಹಕಾರ ಕೋರಿದರು. ಸೋನಿಯಾ ಜಾರ್ಜ್ ಸ್ವಾಗತಿಸಿ ,ವಂದಿಸಿದರು.

LEAVE A REPLY

Please enter your comment!
Please enter your name here