ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾ|ಘಟಕದ ಚುನಾವಣೆ: ಪ್ರಥಮ‌ ದಿನದಂದು ಯಾವುದೇ ನಾಮಪತ್ರ ಸಲ್ಲಿಕೆ ಇಲ್ಲ

0

ಪುತ್ತೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ 2022-25ನೇ ಸಾಲಿನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ದ.5 ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಸಲ್ಲಿಕೆಯ ಪ್ರಥಮ ದಿನವಾದ ನ.26ರಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿಯಾಗಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಅವರು ಮಾಹಿತಿ ನೀಡಿದ್ದಾರೆ.

ಪುತ್ತೂರು ಪತ್ರಿಕಾ ಭವನಕ್ಕೆ ಆಗಮಿಸಿದ್ದ ಅವರು‌ ನಾಮಪತ್ರ ಸಲ್ಲಿಸಲು ಪ್ರಥಮ ದಿನವಾದ ನ.26ರಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನ.27 ಮತ್ತು 28ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಬಳಿಕ ನಾಮಪತ್ರ ಪರಿಶೀಲನೆ ನಡೆದು ಕ್ರಮಬದ್ಧ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ. ನ.29ರ ಮಧ್ಯಾಹ್ನ 1ರವರೆಗೆ ನಾಮಪತ್ರ ವಾಪಸ್ ಪಡೆದುಕೊಳ್ಳಲು ಅವಕಾಶ ಇದೆ. ಬಳಿಕ ಅಂತಿಮ ಕಣದಲ್ಲಿ ಇರುವ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ. ದ.5ರಂದು ಪತ್ರಿಕಾ ಭವನದಲ್ಲಿ ಮತದಾನ ನಡೆಯಲಿದೆ. ಅಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಶ್ರವಣ್ ಕುಮಾರ್(ವಿಜಯ ವಾಣಿ), ಐ.ಬಿ.ಸಂದೀಪ್ ಕುಮಾರ್(ಹೊಸ ದಿಗಂತ), ಎ.ಸಿದ್ದೀಕ್ ನೀರಾಜೆ(ಪ್ರಜಾವಾಣಿ), ಶಶಿಧರ ರೈ(ವಿಜಯವಾಣಿ), ಯ.ಎಲ್.ಉದಯ ಕುಮಾರ್(ಹೊಸ ದಿಗಂತ), ದೀಪಕ್ ಬಿ.(ವಿಜಯ ಕರ್ನಾಟಕ), ಎಂ.ಎಸ್.ಭಟ್(ಉದಯವಾಣಿ), ಮಹಮ್ಮದ್ ನಝೀರ್(ಜಯಕಿರಣ), ಸಂಶುದ್ದೀನ್ ಸಂಪ್ಯ(ವಾರ್ತಾಭಾರತಿ), ಉಮಾಶಂಕರ್(ಸ್ಪಂದನ), ಮೇಘ ಪಾಲೆತ್ತಡಿ(ಸಂಯುಕ್ತ ಕರ್ನಾಟಕ), ಕಿರಣ್ ಪ್ರಸಾದ್ ಕೆ.(ಉದಯವಾಣಿ), ಉಮಾಪ್ರಸಾದ್ ರೈ(ಸುದ್ದಿ ಬಿಡುಗಡೆ), ಸುಧಾಕರ ಕೆ.(ವಿಜಯ ಕರ್ನಾಟಕ), ಅಜಿತ್ ಕುಮಾರ್(ನ್ಯೂಸ್ 18),ಕುಮಾರ್ ಕಲ್ಲಾರೆ(ವಿಜಯ ಕರ್ನಾಟಕ), ಪ್ರವೀಣ್ ಕುಮಾರ್(ವಿಶ್ವವಾಣಿ), ಕೃಷ್ಣಪ್ರಸಾದ್(ವಿಶ್ವವಾಣಿ), ಲೋಕೇಶ್ ಬನ್ನೂರು(ಸುದ್ದಿ ಬಿಡುಗಡೆ), ಶೇಖ್ ಜೈನುದ್ದೀನ್(ಸುದ್ದಿ ಬಿಡುಗಡೆ), ಕರುಣಾಕರ ರೈ ಸಿ.ಎಚ್.(ಸುದ್ದಿ ಬಿಡುಗಡೆ), ಯತೀಶ್ ಉಪ್ಪಳಿಗೆ(ಸುದ್ದಿ ಬಿಡುಗಡೆ) ಮತ್ತು ಶೇಷಪ್ಪ ಕಜೆಮಾರ್(ಸುದ್ದಿ ಬಿಡುಗಡೆ) ಅವರು ಪತ್ರಕರ್ತರ ಸಂಘದ ಚುನಾವಣೆಗೆ ಮತದಾರರಾಗಿದ್ದಾರೆ.

LEAVE A REPLY

Please enter your comment!
Please enter your name here