ಪುತ್ತೂರು: ದ.ಕ.ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮತ್ತು ಪುತ್ತೂರು ಘಟಕದ ವತಿಯಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ಮಕ್ಕಳ ಹಕ್ಕುಗಳು ಮತ್ತು ಪೋಕ್ಸೋ ಕಾರ್ಯಕ್ರಮ ನ.26 ರಂದು ಹಾರಾಡಿ ಸ.ಮಾ.ಉ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಹಾರಾಡಿ ಶಾಲಾ ಮುಖ್ಯಗುರು ಕೆ.ಕುಕ್ಕ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯೆ ವತ್ಸಲಾ ನಾಯಕ್ ಪೋಕ್ಸೋ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿಕ್ಷಣಾಧಿಕಾರಿ ನಝೀರ್ ಅಹಮ್ಮದ್‌ರವರು ಮಕ್ಕಳ ಹಕ್ಕುಗಳ ಕುರಿತು ಮಾತನಾಡಿದರು. ಪಾರಲೀಗಲ್ ಸದಸ್ಯೆ ಶಾಂತಿ ಟಿ ಹೆಗ್ಡೆಯವರು ಸಂವಿಧಾನ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯ ಪ್ರಶಾಂತ್ ಮುರ, ಸುಮಂಗಳಾ ಶೆಣೈ, ಇಂಚರ ಪೌಂಡೇಶನ್ ಇದರ ಕೌನ್ಸಿಲ್‌ಗಳಾದ ಕಾವ್ಯಶ್ರೀ, ಶ್ವೇತಾ ಉಪಸ್ಥಿತರಿದ್ದರು. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಇದರ ಅಧ್ಯಕ್ಷೆ ನಯನಾ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿ ವನಿತಾ ವಂದಿಸಿದರು.