ಇಂಟರ್‍ಯಾಕ್ಟ್ ಕ್ಲಬ್ ಉದ್ಘಾಟನೆ, ಪದಪ್ರದಾನ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಇಂಟರ್‌ಕ್ಯಾಕ್ಟ್ ಕ್ಲಬ್‌ನ ಉದ್ಘಾಟನೆ ಹಾಗೂ ಪದಪ್ರದಾನ ಸಮಾರಂಭ ನ. 21ರಂದು ಶಾಲಾ ಸಭಾಂಗಣದಲ್ಲಿ ಜರಗಿತು.


ಅಧ್ಯಕ್ಷೆಯಾಗಿ ಸುಶ್ಮಿತಾ, ಕಾರ್ಯದರ್ಶಿಯಾಗಿ ಪವಿತ್ರಾ, ಪದಾಧಿಕಾರಿಗಳಾಗಿ ನರೇಶ್, ಜೆನ್ನೆಟ್ ಪಾಯಸ್, ಜಯಂತ್ ಮೊದಲಾದವರು ಪದಸ್ವೀಕಾರ ಮಾಡಿದರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿ. ಪದಪ್ರದಾನ ಮಾಡಿದರು. ಹರೀಶ್ ಶಾಂತಿ ಅವರು ಸಭಾಪತಿಯಾಗಿ ನೇಮಕಗೊಂಡಿದ್ದಾರೆ.

ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ. ರೈ, ವಲಯ ಸಂಯೋಜಕ ಉಮೇಶ್ ಆಚಾರ್, ಯುವಜನ ಸೇವಾ ನಿರ್ದೇಶಕ ಪ್ರೇಮಾನಂದ್, ಶಾಲಾ ಮುಖ್ಯಶಿಕ್ಷಕ ವಸಂತ್ ಉಪಸ್ಥಿತರಿದ್ದರು. ಪರಮೇಶ್ವರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here