ಕೊಂಬೆಟ್ಟು ಸರಕಾರಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಸುರೇಶ್ ಎನ್.ಕೆ.ರವರಿಗೆ ಬೀಳ್ಕೊಡುಗೆ: ನೂತನ ಪ್ರಾಂಶುಪಾಲರಾಗಿ ಧರ್ಣಪ್ಪ ಗೌಡ ಕೆ. ಅಧಿಕಾರ ಸ್ವೀಕಾರ

0

ಪುತ್ತೂರು : ಮೊಂಟೆಪದವು ಸರಕಾರಿ ಪ.ಪೂ.ಕಾಲೇಜಿಗೆ ವರ್ಗಾವಣೆಗೊಂಡ ಕೊಂಬೆಟ್ಟು ಸರಕಾರಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಸುರೇಶ್ ಎನ್.ಕೆ.ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ವರ್ಗಾವಣೆಗೊಂಡ ಪ್ರಾಚಾರ್ಯ ಸುರೇಶ್ ಎನ್.ಕೆ. ಮಾತನಾಡಿ ನಾಲ್ಕು ವರ್ಷಗಳ ಕಾಲ ಇಲ್ಲಿ ಜವಾಬ್ದಾರಿ ನಿರ್ವಹಿಸಿದ್ದು ಜೀವನದಲ್ಲಿಯೇ ಅವಿಸ್ಮರಣೀಯ ಕ್ಷಣಗಳು ಎಂದರು. ಕೊಂಬೆಟ್ಟು ಕಾಲೇಜಿನ ಪ್ರಭಾರ ಪ್ರಾಚಾರ್ಯ ಧರ್ಣಪ್ಪ ಗೌಡ ಕೆ.ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸುವ ಭರವಸೆಯಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಉಪನ್ಯಾಸಕರಾದ ಯೋಗೀಶ ಕೆ., ಕಾತ್ಯಾಯಿನಿ, ಪದ್ಮನಾಭರವರು ಮಾತನಾಡಿ ಶುಭಹಾರೈಸಿದರು.


ಇತಿಹಾಸ ಉಪನ್ಯಾಸಕ ಜಯಪ್ರಕಾಶ್ ಪ್ರಾರ್ಥಿಸಿದರು. ಹಿರಿಯ ಉಪನ್ಯಾಸಕ ಈಶ್ವರ ಭಟ್ ಸ್ವಾಗತಿಸಿದರು. ಉಪನ್ಯಾಸಕ ಉಮಾಮಹೇಶ್ವರ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ಮನಮೋಹನ ವಂದಿಸಿದರು. ಹಿರಿಯ ಉಪನ್ಯಾಸಕ ಸುಬ್ರಹ್ಮಣ್ಯ ಎಂ. ಕಾರ್ಯಕ್ರಮ ನಿರೂಪಿಸಿದರು.

ಅಧಿಕಾರ ಸ್ವೀಕಾರ: ಕೊಂಬೆಟ್ಟು ಪ.ಪೂ.ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಉಪನ್ಯಾಸಕ ಧರ್ಣಪ್ಪ ಗೌಡ ಕೆ.ರವರು ಅಧಿಕಾರ ವಹಿಸಿಕೊಂಡರು. ಕನ್ಯಾನ, ಬೆಟ್ಟಂಪಾಡಿ, ಕಬಕ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೨೦೧೮ರಿಂದ ಕೊಂಬೆಟ್ಟು ಕಾಲೇಜಿನಲ್ಲಿ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಳೆನೇರಂಕಿ ನಿವಾಸಿಯಾಗಿದ್ದ ಇವರು ಪ್ರಸ್ತುತ ಮೇಘ ನಗರದ ಮಂಜುಶ್ರೀ ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here