ಕೆಮ್ಮಿಂಜೆ ಶ್ರೀರಾಮ ಭಜನಾ ಮಂದಿರದಲ್ಲಿ ಸಂಭ್ರಮಿಸಿದ 59ನೇ ವರ್ಷದ ಭಜನಾ ವಾರ್ಷಿಕೋತ್ಸವ

0

ಪುತ್ತೂರು:ಕೆಮ್ಮಿಂಜೆ ಶ್ರೀಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಬಳಿಯಿರುವ ಶ್ರೀ ರಾಮ ಭಜನಾ ಮಂದಿರದಲ್ಲಿ ಪ್ರತಿವರ್ಷ ದೇವರ ಜಾತ್ರೋತ್ಸವದಲ್ಲಿ ಪಂಚಮಿಯಂದು ನಡೆಯುವ ಭಜನಾ ವಾರ್ಷಿಕೋತ್ಸವದ 59ನೇ ವರ್ಷದ ‘ಭಜನಾ ವಾರ್ಷಿಕೋತ್ಸವ’ವು ವಿವಿಧ ಭಜನಾ ಮಂಡಳಿಗಳ ಪಾಲ್ಗೊಳ್ಳುವಿಕೆಯಲ್ಲಿ ಸಂಭ್ರಮದಿಂದ ನೆರವೇರಿತು.

ಬೆಳಿಗ್ಗೆ ಭಜನಾ ಮಂದಿರದಲ್ಲಿ ಬೆಳಿಗ್ಗೆ ಶ್ರೀ ಗಣಪತಿ ಹೋಮ, ಸಂಜೆ ಕೆಮ್ಮಿಂಜೆ ಲಲಿತಾ ಸಹಸ್ರನಾಮ ಮಂಡಳಿಯವರಿಂದ ಲಲಿತಾ ಸಹಸ್ರನಾಮ ಪಠಣ ನಡೆಯಿತು. ಬಳಿಕ ಶ್ರೀ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಭಜನಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ ದೀಪ ಬೆಳಗಿಸಿ ಚಾಲನೆ ನೀಡಿದರು. ನಂತರ ವಿವಿಧ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ದೇವರ ಜಾತ್ರೋತ್ಸವದ ಅಂಗವಾಗಿ ರಾತ್ರಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವರಿಗೆ ಕಟ್ಟೆಪೂಜೆ, ರಾತ್ರಿ 2 ಗಂಟೆಗೆ ಮಹಾಪೂಜೆ, ಮಂಗಳಾಚರಣೆ, ದೀಪಸ್ಥಂಭನ ಹಾಗೂ ಪ್ರಸಾದ ವಿತರಣೆ ನಡೆಯಿತು.

ಭಜನಾ ಮಂದಿರದ ಅಧ್ಯಕ್ಷ ಶಾಮಣ್ಣ ಮೊಟ್ಟೆತ್ತಡ್ಕ, ಗೌರವಾಧ್ಯಕ್ಷ ಸೋಮನಾಥ ರಾವ್, ಕಾರ್ಯದರ್ಶಿ ಬಾಲಚಂದ್ರ ಮೊಟ್ಟೆತ್ತಡ್ಕ, ಜೊತೆ ಕಾರ್ಯದರ್ಶಿ ದಯಾನಂದ ಅತ್ತಾಳ, ಉಪಾಧ್ಯಕ್ಷ ಜನಾರ್ದನ ರಾವ್, ಕೋಶಾಧಿಕಾರಿ ಸೂರ್ಯಕುಮಾರ್ ಮರೀಲ್, ಭಾಸ್ಕರ ಮರೀಲ್, ಲೆಕ್ಕಪರಿಶೋಧಕ ರಾಜೇಂದ್ರ ಸಿ.ಎಚ್ ಸಂಜಯನಗರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಭಜನಾ ವಾರ್ಷಿಕೋತ್ಸವದಲ್ಲಿ ಶ್ರೀರಾಮ ಮಹಿಳಾ ಭಜನಾ ಮಂಡಳಿ ಕೆಮ್ಮಿಂಜೆ, ವೈಷ್ಣವಿ-ವೈದೇಹಿ ಮಹಿಳಾ ಭಜನಾ ಮಂಡಳಿ ಬೊಳುವಾರು, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಮಿಷನ್‌ಮೂಲೆ ಮೊಟ್ಟೆತ್ತಡ್ಕ, ಶ್ರೀ ಶಾರದಾಂಬಾ ಭಜನಾ ಮಂದಿರ ಸೇರಾಜೆ ನರಿಮೊಗರು, ಶ್ರೀಶಾರದಾ ಭಜನಾ ಮಂಡಳಿ ಪುತ್ತೂರು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉದಯಗಿರಿ ಮುಂಡೂರು, ಶ್ರೀಗುರುಕುಲ ಕಲಾಕೇಂದ್ರ ಪುರುಷರಕಟ್ಟೆ, ಶ್ರೀ ವೆಂಕಟ್ರಮಣ ಭಜನಾ ಮಂಡಳಿ ಪುತ್ತೂರು, ಶ್ರೀಮಹಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ಶ್ರೀರಾಮಾಂಜನೇಯ ಭಜನಾ ಮಂಡಳಿ ಪೆರ್ನೆಯವರಿಂದ ಭಜನಾ ಸೇವೆಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here