ಅಗ್ನಿಪಥ್ ಸೇನಾ ನೇಮಕಾತಿಗೆ ವಿದ್ಯಾಮಾತಾ ಅಕಾಡೆಮಿಯ ಐದು ವಿದ್ಯಾರ್ಥಿಗಳು ಆಯ್ಕೆ

0

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಭಾರತೀಯ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ನಡೆದ ಪ್ರಪ್ರಥಮ ಸೇನಾ ರ್‍ಯಾಲಿಯಲ್ಲಿ ದೈಹಿಕ ಕ್ಷಮತೆಯ ಮತ್ತು ಲಿಖಿತ ಪರೀಕ್ಷೆಯ ತರಬೇತಿಯನ್ನು ನೀಡಿದ್ದು ಪ್ರಥಮ ನೇಮಕಾತಿಯಲ್ಲೇ ಓಟ್ಟು 7 ಜನ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ನೌಕಾ ಸೇನೆಗೆ ಪೌರ್ಷಿ ರೈ, ಭಾರತೀಯ ಭೂಸೇನೆಗೆ ವೈಭವ್ ನಾಣಯ್ಯ ಆಯ್ಕೆಯಾಗಿದ್ದನ್ನು ಸ್ಮರಿಸಿಕೊಳ್ಳಬಹುದು.


ಇದೀಗ ಹಾವೇರಿ ರ್‍ಯಾಲಿಯಲ್ಲಿ ಉತ್ತೀರ್ಣರಾಗಿದ್ದ ಅಳಿಕೆ ಗ್ರಾಮದ ಎರುಂಬು ರವೀಂದ್ರ ಶೆಟ್ಟಿ ಮತ್ತು ಗೀತಾ ರೈ ದಂಪತಿಯ ಪುತ್ರ ಲಕ್ಷ್ಮೀಸಾಗರ್, ಗೋಳಿತೊಟ್ಟು ಗ್ರಾಮದ ಅರಂತಬೈಲಿನ ಕುಂಞಣ್ಣ ಗೌಡ ಮತ್ತು ಗೀತಾ ಗೌಡ ದಂಪತಿಯ ಪುತ್ರ ಜಯಪ್ರಕಾಶ್ ಎ., ಬೆಳಂದೂರು ಗ್ರಾಮದ ಅಮೈ ಮನೆಯ ಕೇಶವ ಗೌಡ ಮತ್ತು ನಿರ್ಮಲಾ ದಂಪತಿಯ ಪುತ್ರ ಭವನ್ ಕುಮಾರ್ ಎ.ಕೆ., ಕಾರಿಂಜ ಗ್ರಾಮ ಚಾವಡಿ ಮನೆಯ ದೂಮಪ್ಪ ಗೌಡ ಮತ್ತು ಲಲಿತಾ ದಂಪತಿಯ ಪುತ್ರ ಸಚಿನ್ ಹಾಗೂ ಸೇಸನಡ್ಕ ಕೃಷ್ಣಪ್ಪ ಮತ್ತು ಪ್ರೇಮ ದಂಪತಿಯ ಪುತ್ರ ಕಿಶೋರ್‌ರವರು ಭಾರತೀಯ ಭೂಸೇನೆಗೆ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. ವಿದ್ಯಾಮಾತಾ ಅಕಾಡೆಮಿಯಲ್ಲಿ ಹತ್ತು ದಿನಗಳ ಕಾಲ ರಾತ್ರಿ ಹಗಲು ಸರಣಿ ತರಬೇತಿಯನ್ನು ನೀಡಲಾಗಿತ್ತು.

ಭಾರತೀಯ ಸೇನೆ, ಪೋಲೀಸ್ ಇಲಾಖೆ, ಬ್ಯಾಂಕಿಂಗ್‌ನಿಂದು ಹಿಡಿದು ಕೆ.ಎ.ಎಸ್/ ಐ.ಎ.ಎಸ್‌ವರೆಗೆ ವಿವಿಧ ನೇಮಕಾತಿ ಗಳಿಗೆ ವಿದ್ಯಾ ಮಾತಾ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತಿದ್ದು ಅಗ್ನಿಪಥ್ ಯೋಜನೆಯ ಪ್ರಥಮ ನೇಮಕಾತಿಯಲ್ಲಿ ಉತ್ತಮ ಫಲಿತಾಂಶ ಲಭ್ಯವಾಗಿದ್ದು ಸಂತಸ ತಂದಿದೆ.

ಭಾಗ್ಯೇಶ್ ರೈ
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ

LEAVE A REPLY

Please enter your comment!
Please enter your name here