ವೇಣೂರು: ಇತಿಹಾಸ ಪ್ರಸಿದ್ಧ ಬಜಿರೆ ಗ್ರಾಮದ ಮುದ್ದಾಡಿ ಶ್ರೀ ಮಾರವಾಂಡಿ ಕೊಡಮಣಿತ್ತಾಯ ಬೈದರ್ಕಳ ದೈವಸ್ಥಾನದಲ್ಲಿ ಮೆಟ್ಟಿಲು ರಚನೆಗೆ ರೂ. 10 ಲಕ್ಷ ವೆಚ್ಚದ ಕಾಮಗಾರಿಗೆ ನ.28 ರಂದು ಶಿಲಾನ್ಯಾಸ ನೆರವೇರಿತು.
ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿ, ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಸಹಕಾರ ನೀಡುವುದಾಗಿ ತಿಳಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾರಗುತ್ತು ಯಂ. ವಿಜಯರಾಜ ಅಧಿಕಾರಿ, ಪೆರ್ಮಾಣುಗುತ್ತು ಸುರೇಶ್ ಆರಿಗ, ಗ್ರಾ.ಪಂ. ಸದಸ್ಯರಾದ ಅರುಣ್ ಕ್ರಾಸ್ತ, ಸುನಿಲ್ ಕುಮಾರ್, ಲೋಕಯ್ಯ ಪೂಜಾರಿ, ಸುಜಾತ, ಲೀಲಾವತಿ, ಮಲ್ಲಿಕಾ, ಸಂಭಾಷಿಣಿ ಉದಯಕುಮಾರ್, ದಿನೇಶ್ ತಾರಿಪಡ್ಪು, ದೈವಸ್ಥಾನಕ್ಕೆ ಸಂಬಂಧಿತ ಗುರಿಕಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕುಂಞಡಿ ಲಕ್ಷ್ಮೀನಾರಾಯಣ ಅಸ್ರಣ್ಣರು ಪೂಜಾ ವಿಧಾನ ನೆರವೇರಿಸಿದರು.