ಚಾರ್ವಾಕ ಪ್ರಾ.ಕೃ.ಪ.ಸ. ಸಂಘದಿಂದ ಮೋನಪ್ಪ ಗೌಡ ಅಂಬುಲರವರಿಗೆ ಬೀಳ್ಕೊಡುಗೆ

0

ಸಂಘದ ಬೆಳವಣಿಗೆಯಲ್ಲಿ ಮೋನಪ್ಪ ಗೌಡರವರ ಪಾತ್ರ ಪ್ರಮುಖವಾದುದು- ಆನಂದ ಗೌಡ ಮೇಲ್ಮನೆ

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಎಲ್ಲರೊಂದಿಗೆ ಸೌಜನ್ಯವಾಗಿ ಕಾರ್ಯನಿರ್ವಹಿಸಿದ ಮೋನಪ್ಪ ಗೌಡರವರ ಸಂಘದ ಬೆಳವಣಿಗೆಯಲ್ಲಿ ಪಾತ್ರ ಪ್ರಮುಖವಾದುದು. ಸಂಘದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ನಿಮ್ಮ ಸಲಹೆ ಸಹಕಾರ ಸಂಘಕ್ಕೆ ಮುಂದೆಯೂ ಇರಬೇಕು ಎಂದು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಆನಂದ ಗೌಡ ಮೇಲ್ಮನೆ ಹೇಳಿದರು.

ಅವರು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನ 30ರಂದು ಸೇವೆಯಿಂದ ನಿವೃತ್ತಿಗೊಂಡ ಮೋನಪ್ಪ ಗೌಡ ಅಂಬುಲ ಅವರನ್ನು ನ 30ರಂದು ಸಂಘದ ಕಚೇರಿ ಕಾಣಿಯೂರಿನಲ್ಲಿ ಸನ್ಮಾನಿಸಿ ಮಾತನಾಡಿದರು.

ಕೇಂದ್ರ ಸಹಕಾರ ಬ್ಯಾಂಕಿನ ವಲಯ ಮೇಲ್ವೀಚಾರಕ ವಸಚಿತ್. ಎಸ್ ಮಾತನಾಡಿ, ಸಂಘದಲ್ಲಿ ವಿವಿಧ ಹುದ್ದೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ಕಾರ್ಯನಿಷ್ಠೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಈ ಭಾಗದ ರೈತಾಪಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನಮನ್ನಣೆಗೆ ಪಾತ್ರರಾಗಿದ್ದೀರಿ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಮೋನಪ್ಪ ಗೌಡ ಅಂಬುಲರವರ ಪತ್ನಿ ಬಾಲಕಿ ಅಂಬುಲ, ಪುತ್ರ ಸಂದೇಶ್ ಅಂಬುಲ, ಸಂಘದ ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು, ನಿರ್ದೇಶಕರಾದ ಅನಂತಕುಮಾರ್ ಬೈಲಂಗಡಿ, ಹರೀಶ್ ಗೌಡ ಅಂಬುಲ, ವಿಶ್ವನಾಥ ಮರಕ್ಕಡ, ವಿಶ್ವನಾಥ ಕೂಡಿಗೆ, ಪುಟ್ಟಣ್ಣ ಗೌಡ ಮುಗರಂಜ, ಜಯರಾಮ ಕೆಳಗಿನಕೇರಿ, ಕಮಲ ಮುದುವ, ಪೂರ್ಣಿಮಾ ಬೆದ್ರಾಜೆ, ರಮೇಶ್ ಉಪ್ಪಡ್ಕ, ರತ್ನಾವತಿ ಮುದುವ, ಸಿಬ್ಬಂದಿಗಳಾದ ವಾಣಿ ಅಬಿಕಾರ, ಭವತ್ ಅಗಳಿ, ವಸಂತಿ, ಪುನೀತ್ ಬಂಡಾಜೆ, ವಿನಯ ಎಳುವೆ, ವೇಣುಗೋಪಾಲ ಉಪ್ಪಡ್ಕ, ಸವಿತಾ, ಕೇಶವ ಗೌಡ, ಈಶ್ವರ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here