ಪುತ್ತೂರು: ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಅವರು ಕೃಷಿ ಅಧ್ಯಯನ ಪ್ರವಾಸಕ್ಕಾಗಿ ಜೂ.20ರಂದು ಇಸ್ರೇಲ್ಗೆ ತೆರಳಿದ್ದಾರೆ.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನೇತೃತ್ವದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯಿಂದ ಒಟ್ಟು 26 ಮಂದಿ ಕೃಷಿ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದು, ಈ ಪೈಕಿ ಕೃಷ್ಣ ಕುಮಾರ್ ರೈ ಅವರು ಅಧ್ಯಯನ ಪ್ರವಾಸಕ್ಕೆ ಆಯ್ಕೆಗೊಂಡಿದ್ದಾರೆ. ಜೂ. 20ರಿಂದ 25ರ ತನಕ ಇಸ್ರೇಲ್ ದೇಶದ ವಿವಿಧ ಕಡೆಗಳಲ್ಲಿ ಸುಧಾರಿತ ಕೃಷಿ ಪದ್ಧತಿಯ ಕುರಿತು ಅಧ್ಯಯನ ನಡೆಸಲಿದ್ದು, ಜೂ. 26ಕ್ಕೆ ಸ್ವದೇಶಕ್ಕೆ ಹಿಂತಿರುಗಲಿದ್ದಾರೆ.