ಬ್ಯಾಂಕ್ ಆಫ್ ಬರೋಡಾ ಬೃಹತ್ ರೈತ ಮೇಳದಲ್ಲಿ  ಕಡಮಜಲು ಸುಭಾಸ್ ರೈಯವರಿಗೆ ಸನ್ಮಾನ

0
ಪುತ್ತೂರು: ಬ್ಯಾಂಕ್ ಆಫ್ ಬರೋಡಾ ದ ದಕ್ಷಿಣ ಭಾರತ ವಲಯ ಮಟ್ಟದ ವತಿಯಿಂದ ಕಿಸಾನ್ ದಿವಸ್ ಅಂಗವಾಗಿ ನ. 28 ರಂದು ಮಂಗಳೂರಿನ ಎಕ್ಕೂರು ಮೀನುಗಾರಿಕಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಬೃಹತ್ ರೈತ ಮೇಳದಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಸ್ ರೈಯವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಡಮಜಲುರವರು ‘ಬ್ಯಾಂಕ್ ಆಫ್ ಬರೋಡಾ ದೊಂದಿಗೆ ಕೃಷಿಕರು ನಿರಂತರ ಸಂಪರ್ಕದಲ್ಲಿದ್ದಾಗ ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ನನ್ನಂತಹ ಕೃಷಿಕರನ್ನು ಗುರುತಿಸಿ ಸನ್ಮಾನಿಸಿರುವುದು ಇಡೀ ಕೃಷಿ ಕ್ಷೇತ್ರಕ್ಕೆ ಸಂದ ಗೌರವ ಎಂದು ಭಾವಿಸಿದ್ದೇನೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ರೈತರ ಪರಿಶ್ರಮಕ್ಕಾಗಿ ಗೌರವ ಸಲ್ಲಿಸಿದ್ದಾರೆ. ರೈತ ದೇವೋಭವಃ ಎನ್ನುವ ಮಾತು ಸತ್ಯವಾಗುತ್ತಿದೆ’ ಎಂದರು.
ಬ್ಯಾಂಕ್ ಆಫ್ ಬರೋಡಾದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಧೋಬಾಲ್, ಮಂಗಳೂರು ವಲಯ ಉಪವಲಯ ಮುಖ್ಯಸ್ಥ ಆರ್. ಗೋಪಾಲಕೃಷ್ಣ, ಉಪ ಪ್ರಧಾನ ವ್ಯವಸ್ಥಾಪಕ ವಿನಯ್ ಗುಪ್ತಾ,  ಮೀನುಗಾರಿಕಾ ಕಾಲೇಜಿನ ಮುಖ್ಯಸ್ಥ ಡಾ. ಶಿವರಾಮ ಮಗದ, ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಟಿ. ಜೆ. ರಮೇಶರವರ ಉಪಸ್ಥಿತಿಯಲ್ಲಿ ಸನ್ಮಾನ ನಡೆಯಿತು.
ಅತ್ಯುತ್ತಮ ಕೃಷಿಕ,‌ ಚಿನ್ನದ ಪದಕ ವಿಜೇತ ಕೃಷಿಕರಾದ ಕಡಮಜಲು ಸುಭಾಸ್ ರೈಯವರು ಬ್ಯಾಂಕ್ ಆಫ್ ಬರೋಡಾ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕರೂ ಆಗಿದ್ದಾರೆ. ಇವರ ಸಮಗ್ರ ಮತ್ತು ಮಾದರಿ ಕೃಷಿಯಿಂದಾಗಿ ಪರವೂರಿನ, ಹೊರ ರಾಜ್ಯಗಳಿಂದಲೂ ಅನೇಕ ಕೃಷಿ ಅಧ್ಯಯನ ಪ್ರವಾಸವನ್ನು ಇವರ ಸಿರಿಕಡಮಜಲು ಕೃಷಿಕ್ಷೇತ್ರಕ್ಕೆ ಕೈಗೊಳ್ಳಲಾಗುತ್ತಿದೆ. ಬರಡು ಭೂಮಿಯನ್ನು ಕೃಷಿಯಲ್ಲಿ ಬಂಗಾರದ ಭೂಮಿಯನ್ನಾಗಿಸಿದ ರೈಯವರ ಕೃಷಿ ಸಾಧನೆಯನ್ನು ಗುರುತಿಸಿ ಬ್ಯಾಂಕ್ ಆಫ್ ಬರೋಡಾ ಈ ಸನ್ಮಾನಕ್ಕೆ ಆಯ್ಕೆ ಮಾಡಿತ್ತು.

LEAVE A REPLY

Please enter your comment!
Please enter your name here