ಪದಾಳ: ಷಷ್ಠಿ ಉತ್ಸವ, ಬಲಿವಾಡು ಕೂಟ ಸಂಪನ್ನ

0

ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಷಷ್ಠಿ ಉತ್ಸವ ಮತ್ತು ಬಲಿವಾಡು ಕೂಟ ಸಂಪನ್ನಗೊಂಡಿತು.

ಷಷ್ಠಿ ಉತ್ಸವದ ಮುನ್ನಾ ದಿನ ಮಾರ್ಗಶಿರ ಮಾಸದ ಶುದ್ಧ ಪಂಚಮಿಯಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷ ಬಲಿ ನಡೆಯಿತು. ಶುದ್ಧ ಷಷ್ಠಿಯ ದಿನ ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಉಷಃ ಪೂಜೆ, ಬೆಳಗ್ಗಿನ ಪೂಜೆ, ನಾಗತಂಬಿಲ ಮಹಾಪೂಜೆ ಮತ್ತಿತರ ಧಾರ್ಮಿಕ ವಿಧಿ-ವಿಧಾನಗಳು ನಡೆದು, ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಪಲ್ಲ ಪೂಜೆ ನಡೆದು ಅನ್ನ ಸಂತರ್ಪಣೆ ನಡೆಯಿತು. ನೂರಾರು ಸಂಖ್ಯೆಯಲ್ಲಿದ್ದ ವೃತಾಧಾರಿಗಳು ಷಷ್ಠಿ ವೃತಾಚರಣೆ ನಡೆಸಿದರು. ಈ ಸಂದರ್ಭ ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಸದಸ್ಯರಿಂದ ಭಜನಾ ಸೇವೆ ನಡೆಯಿತು. ಬಳಿಕ ರಾತ್ರಿ ಪೂಜೆಯಾಗಿ ಪ್ರಸಾದ ವಿತರಣೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಗಣ ಶ್ರೀ ಸುಬ್ರಹ್ಮಣ್ಯನ ಸೇವೆಗೈದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ನಡುಸಾರು ಉದಯಶಂಕರ ಭಟ್, ಉಪಾಧ್ಯಕ್ಷೆ ಶಾಂಭವಿ ರೈ ಪುಳಿತ್ತಡಿ, ಕಾರ್ಯದರ್ಶಿ ಕೇಶವ ರಂಗಾಜೆ, ಕೋಶಾಽಕಾರಿ ಹರೀಶ್ವರ ಮೊಗ್ರಾಲ್ ಕುವೆಚ್ಚಾರು, ಸದಸ್ಯರಾದ ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೋಕೇಶ್ ಬೆತ್ತೋಡಿ, ವಿಜಯ ಶಿಲ್ಪಿ ಕುಕ್ಕುಜೆ, ಸುರೇಶ ಅತ್ರೆಮಜಲು, ರಾಮಚಂದ್ರ ಮಣಿಯಾಣಿ ನೆಡ್ಚಿಲು, ಸುರೇಶ್ ಗೌಂಡತ್ತಿಗೆ, ನೋಣಯ್ಯ ಗೌಡ ಬೊಳ್ಳಾವು, ಕೃಷ್ಣಪ್ಪ ಗೌಡ ಬೊಳ್ಳಾವು, ಜತ್ತಪ್ಪ ನಾಯ್ಕ ಬೊಳ್ಳಾವು, ಪ್ರಮುಖರಾದ ಡಾ. ಕೆ.ಜಿ. ಭಟ್, ಹರಿಪ್ರಸಾದ್ ಭಟ್ ಕುವೆಚ್ಚಾರು, ಜಗದೀಶ್ ರಾವ್ ಮಣಿಕ್ಕಳ, ಮಹಾಲಿಂಗ ಭಟ್ ಬೊಳ್ಳಾವು, ಪ್ರತಾಪ್ ಪೆರಿಯಡ್ಕ, ಪ್ರಸನ್ನ ಕುಮಾರ್ ಪೆರಿಯಡ್ಕ, ನವೀನ್ ಕಲ್ಯಾಟೆ, ಮಹಾಲಿಂಗ ಕಜೆಕ್ಕಾರು, ಲಕ್ಷ್ಮಣ ಗೌಡ ನೆಡ್ಚಿಲು, ಹೇರಂಭ ಶಾಸಿ, ಸತೀಶ್ ರಾವ್ ನೆಡ್ಚಿಲು, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ರಾಮ ಭಟ್ ಬೊಳ್ಳಾವು, ಕಿರಣ್ ಜಿ., ಚಿನ್ಮಯ, ಜಯಗೋವಿಂದ ಶರ್ಮಾ, ದುರ್ಗಾಪ್ರಸಾದ್ ಬೊಳ್ಳಾವು, ನಾರಾಯಣ ಭಟ್ ಪೆರಿಯಡ್ಕ, ಪ್ರಶಾಂತ ಪೆರಿಯಡ್ಕ, ಧರ್ನಪ್ಪ ನಾಯ್ಕ ಬೊಳ್ಳಾವು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here