ಕುಂಬ್ರ ಮರ್ಕಝುಲ್ ಹುದಾ ‘ಗಲ್ಫ್ ಕೌನ್ಸಿಲ್’ ಕೋ ಆರ್ಡಿನೇಟರ್ ಆಗಿ ಬಶೀರ್ ಇಂದ್ರಾಜೆ ಆಯ್ಕೆ

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಭಿವೃದ್ಧಿಗಾಗಿ ಕಾರ್ಯಾಚರಿಸುವ ವಿವಿಧ ಗಲ್ಫ್ ಘಟಕಗಳನ್ನು ಸಮನ್ವಯಗೊಳಿಸುವ ನಿಟ್ಟಿನಲ್ಲಿ ‘ಮರ್ಕಝುಲ್ ಹುದಾ ಗಲ್ಫ್ ಕೌನ್ಸಿಲ್’ ಕೋ ಆರ್ಡಿನೇಟರ್ ಆಗಿ ಬಶೀರ್ ಇಂದ್ರಾಜೆ ಅವರನ್ನು ನೇಮಕ ಮಾಡಲಾಗಿದೆ.
ಸುದೀರ್ಘ ಕಾಲ ಸಂಸ್ಥೆಯ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ  ಕಾರ್ಯ ನಿರ್ವಹಿಸಿ ಕಾಲೇಜಿನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಇವರು ನೇತೃತ್ವ ನೀಡಿದ್ದಾರೆ.
ಜುಬೈಲ್‌ನಲ್ಲಿ ನಡೆದ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಸಮಾವೇಶದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಈ ಆಯ್ಕೆಯನ್ನು ಘೋಷಿಸಿದರು.

LEAVE A REPLY

Please enter your comment!
Please enter your name here