ಡಿ.4 ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 9ನೇ ಉಚಿತ ವೈದ್ಯಕೀಯ ಶಿಬಿರ

0

ಪುತ್ತೂರು:ಕಳೆದ ಎಂಟು ತಿಂಗಳಿನಿಂದ ನಿರಂತರವಾಗಿ ತಿಂಗಳಿಗೊಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿರುವ ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿಯ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ 9ನೇ ತಿಂಗಳ ಶಿಬಿರವು ಡಿ.4ರಂದು ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಶಿಬಿರದಲ್ಲಿ ಭಾಗವಹಿಸುವ ವೈದ್ಯರು:
ಹೃದ್ರೋಗ ತಜ್ಞ ಡಾ.ವಿಶುಕುಮಾರ್, ಶ್ವಾಸಕೋಶ ತಜ್ಞ ಡಾ. ಪ್ರೀತಿರಾಜ್ ಬಲ್ಲಾಳ್, ತಜ್ಞ ವೈದ್ಯ ಡಾ.ಸುರೇಶ್ ಪುತ್ತೂರಾಯ, ಚರ್ಮರೋಗ ತಜ್ಞ ಡಾ. ಸಚಿನ್ ಶೆಟ್ಟಿ, ಕೀಲು ಮತ್ತು ಎಲುಬು ತಜ್ಞ ಡಾ. ಸಚಿನ್ ಶಂಕರ್ ಹಾರಕೆರೆ, ಇಎನ್‌ಟಿ ತಜ್ಞೆ ಡಾ. ಅರ್ಚನಾ, ಸರ್ಜನ್ ಡಾ. ಯಶವಂತ, ಹಿರಿಯ ವೈದ್ಯ ದಂಪತಿಗಳಾದ ಡಾ. ಪ್ರಕಾಶ್ ಕುಲಕರ್ಣಿ ಮತ್ತು ಡಾ.ಅರುಣಾ ಕುಲಕರ್ಣಿ, ಆಯುರ್ವೇದ ತಜ್ಞರಾದ ಡಾ. ಸಾಯಿಪ್ರಕಾಶ್, ಡಾ. ದೀಕ್ಷಾ, ಡಾ. ವೇಣುಗೋಪಾಲ್ ಆಗಮಿಸಿ ಚಿಕಿತ್ಸೆ ನೀಡಲಿದ್ದಾರೆ

ಈ ಭಾರಿಯ ಶಿಬಿರದಲ್ಲೇನಿದೆ:
ಈ ಬಾರಿಯ ಶಿಬಿರದಲ್ಲಿ ಹೃದ್ರೋಗ ತಪಾಸಣೆ, ಚರ್ಮರೋಗ ತಪಾಸಣೆ, ಕೀಲು ಮತ್ತು ಎಲುಬು ತಪಾಸಣೆ, ಇಎನ್‌ಟಿ, ಅಸ್ತಮಾ, ಶ್ವಾಸಕೋಶದ ಚಿಕಿತ್ಸೆ, ತಜ್ಞರಿಂದ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಉಚಿತ ಔಷಧಿಗಳು ವಿತರಣೆ ಮತ್ತು ಆರೋಗ್ಯ ಇಲಾಖೆ ವತಿಯಿಂದ ಬೂಸ್ಟರ್ ಡೋಸ್ ಲಸಿಕೆ ವಿತರಣೆಯು ಲಭ್ಯವಿದೆ.

ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಐಡಿಯಲ್ ಲ್ಯಾಬೊರೇಟರಿ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ, ಹಾಗೂ ಹಲವು ಔಷಧಿ ಕಂಪೆನಿಗಳು ಶಿಬಿರದಲ್ಲಿ ಸಹಕರಿಸಲಿದ್ದಾರೆ. ವೈದ್ಯರ ಸೂಚನೆಯಂತೆ ಅವಶ್ಯಕತೆ ಇರುವ ಶಿಬಿರಾರ್ಥಿಗಳಿಗೆ ಸ್ಕ್ಯಾನ್, TMT, ಎಕ್ಸರೇ, Echo ಪರೀಕ್ಷೆಗಳನ್ನು ದರ್ಬೆಯ ಉಷಾ ಸ್ಕ್ಯಾನ್ ಸೆಂಟರ್‌ನಲ್ಲಿ ಹಾಗೂ CT ಸ್ಕ್ಯಾನ್, MRI ಪರೀಕ್ಷೆಗಳನ್ನು ತೆಂಕಿಲದಲ್ಲಿರುವ ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ಇಲ್ಲಿ ರಿಯಾಯಿತಿ ದರದಲ್ಲಿ ನಡೆಸಲಾಗುವುದು. ಶಿಬಿರವು ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ. ಶ್ರೀದೇವರ ಭಕ್ತಾದಿಗಳು ಶಿಬಿರ ಪ್ರಯೋಜನ ಪಡೆದುಕೊಳ್ಳುವಂತೆ ಆರೋಗ್ಯ ರಕ್ಷಾ ಸಮಿತಿ ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here