ಸಹೋದರನನ್ನು ಕೊಲೆಗೈದ ಅಣ್ಣ

0

ಕೆಮ್ಮಿಂಜೆ ಕಟ್ಟಡವೊಂದರಲ್ಲಿ ನಡೆದ ಘಟನೆ

ಪುತ್ತೂರು: ಅಣ್ಣನೊಬ್ಬ ತನ್ನ ಸ್ವಂತ ತಮ್ಮನನ್ನೇ ಕೊಲೆಗೈದು ಪರಾರಿಯಾಗಿರುವ ಘಟನೆ ಕೆಮ್ಮಿಂಜೆ ಕಟ್ಟಡವೊಂದರಲ್ಲಿ ಡಿ.1ರ ರಾತ್ರಿ ನಡೆದಿರುವ ಕುರಿತು ಬೆಳಕಿಗೆ ಬಂದಿದೆ.


ಪುತ್ತೂರಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಹಾವೇರಿ ಜಿಲ್ಲೆಯ ಹೊಸೂರು ನಿವಾಸಿ ನಿಂಗನ ಗೌಡ ಅವರು ತಮ್ಮ ತಮ್ಮ ಮಾದೇವಪ್ಪ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಡಿ.1ರಂದು ರಾತ್ರಿ ನಿಂಗನಗೌಡ ಅವರು ಅಮಲು ಪದಾರ್ಥ ಸೇವಿಸಿ ನಶೆಯಲ್ಲಿ ತನ್ನ ಸಹೋದರ ಮಾದೇವಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಈ ವೇಳೆ ಮಾದೇವಪ್ಪ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಪರಾರಿ:
ಕೊಲೆ ಮಾಡಿದ ಆರೋಪಿ ನಿಂಗನ ಗೌಡ ಅವರು ಪರಾರಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ನಿಂಗನ ಗೌಡ ಅವರು ಎಲ್ಲಾದರ ಕಂಡು ಬಂದಲ್ಲಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ  08251-230555 , ಮೊಬೈಲ್ ಸಂಖ್ಯೆ : 08251-230555ಅನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here