ಡಿ.4: ಕಬಕ ಹಿ.ಪ್ರಾ ಶಾಲಾ ವಠಾರದಲ್ಲಿ ಕಬಕ, ಪಡ್ನೂರು ನವೋದಯ ಸ್ವ-ಸಹಾಯ ಗುಂಪುಗಳ ಒಕ್ಕೂಟದ ಕ್ರೀಡಾಕೂಟ

0

ಪುತ್ತೂರು: ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌, ಇದರ ಸಹಭಾಗಿತ್ವದಲ್ಲಿ ಕಬಕ, ಪಡ್ನೂರು ನವೋದಯ ಸ್ವ-ಸಹಾಯ ಗುಂಪುಗಳ ಒಕ್ಕೂಟದ ಕ್ರೀಡಾಕೂಟವೂ ಡಿ.4ರಂದು ಕಬಕ ಹಿ.ಪ್ರಾ ಶಾಲಾ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕಬಕ ಹಿ.ಪ್ರಾ. ಶಾಲಾ ಪ್ರಭಾರ ಮುಖ್ಯಗುರುಗಳಾದ ಲತಾ ಕುಮಾರಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವನಿತಾ ಧರಣ್‌ ರವರು ಉದ್ಘಾಟಿಸಲಿದ್ದಾರೆ.

ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌ ನ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ಎಸ್. ಬಿ. ಜಯರಾಮ ರೈ ಬಳಜ್ಜ ರವರು ಬಹುಮಾನ ವಿತರಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲಕೃಷ್ಣ ಭಟ್,
ಕಬಕ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಲ್ಲೇಗ, ಕಬಕ ಶ್ರೀ ಮಹಾದೇವೀ ಧರ್ಮಸೇವಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ವಿ. ಚಂದ್ರಶೇಖರ ನಾಯ್ಕ್, ಕಬಕ ಶ್ರೀ ವಿನಾಯಕ ಇಂಜಿನಿಯರಿಂಗ್‌ ವರ್ಕ್ಸ್ ನ ಮಾಲಕ ರಮೇಶ್ ಆಚಾರ್ಯ ಕೆದಿಮಾ‌ರು. ಕಬಕ ಗ್ರಾ.ಪಂ. ಸದಸ್ಯ ಶಾಬಾ ಕಬಕ, ನವೋದಯ ಗ್ರಾಮವಿಕಾಸ ಚಾರಿಟೇಬಲ್‌ ಟ್ರಸ್ಟ್ (ರಿ.) ಮಂಗಳೂರು ಇದರ ಪುತ್ತೂರು/ಕಡಬ ತಾಲೂಕು ಮೇಲ್ವಿಚಾರಕ ಚಂದ್ರಶೇಖರ್ ಬನ್ನೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here