ಹಗ್ಗಜಗ್ಗಾಟದಲ್ಲಿ ಕೌಕ್ರಾಡಿ ಗ್ರಾ.ಪಂ.ತಂಡ ಪ್ರಥಮ; ಛದ್ಮವೇಷದಲ್ಲಿ ಲೋಕೇಶ್ ಬಾಣಜಾಲು ತೃತೀಯ
ನೆಲ್ಯಾಡಿ: ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್, ಡಾ| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ| ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇದರ ಸಹಯೋಗದಲ್ಲಿ ಕೋಟದಲ್ಲಿ ನಡೆದ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಹೊಳಪು-2022ರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕೌಕ್ರಾಡಿ ಗ್ರಾ.ಪಂ.ನ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಛದ್ಮವೇಷ ಸ್ಪರ್ಧೆಯಲ್ಲಿ ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು ಅವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹಗ್ಗಜಗ್ಗಾಟ ತಂಡವನ್ನು ಗ್ರಾ.ಪಂ.ಸದಸ್ಯರಾದ ಉದಕುಮಾರ್ ದೋಂತಿಲ, ಲೋಕೇಶ್ ಬಾಣಜಾಲು, ಮಹೇಶ್, ರೋಯಿ ಯಾನೆ ಕುರಿಯಾಕೋಸ್ ಟಿ.ಎಂ., ದಿನೇಶ್‌ರವರು ಪ್ರತಿನಿಧಿಸಿದ್ದರು. ಗ್ರಾ.ಪಂ.ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಡೈಸಿವರ್ಗೀಸ್, ವಿಶ್ವನಾಥ, ಹನೀಫ್, ಜನಾರ್ದನ, ಗ್ರಾ.ಪಂ.ಸ್ವಚ್ಚತಾಗಾರರಾದ ಅನುಗ್ರಹ, ಹೇಮಾ, ಗೀತಾ, ಸಿಬ್ಬಂದಿ ಪ್ರೇಮ, ಪಿಡಿಒ ಮಹೇಶ್ ಅವರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಸಚಿವ ಶ್ರೀನಿವಾಸ ಪೂಜಾರಿಯವರು ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಹಲವು ಗಣ್ಯರು ಉಪಸ್ಥಿತರಿದ್ದರು.