ಗೆಜ್ಜೆಗಿರಿ ಮೇಳದ ಯಕ್ಷಗಾನ ಬಯಲಾಟದ ಬ್ಯಾನರ್ ಹರಿದು ವಿಕೃತಿ

0

ತಪ್ಪೊಪ್ಪಿಕೊಳ್ಳದಿದ್ದಲ್ಲಿ ದೈವದ ಮೊರೆ ಹೋಗುವುದಾಗಿ ಎಚ್ಚರಿಕೆ

ಬೆಳ್ತಂಗಡಿ: ಗೆಜ್ಜೆಗಿರಿ ಮೇಳದ ಶ್ರೀಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್‌ನ್ನು ಯಾರೋ ಕಿಡಿಗೇಡಿಗಳ ಗುಂಪೊಂದು ಹರಿದು ವಿಕೃತಿ ಮೆರೆದ ಘಟನೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿ ನಡೆದಿದೆ.

ಮರೋಡಿ ಗ್ರಾಮದ ಪೊಸರಡ್ಕ ಗರೋಡಿ ವಠಾರದಲ್ಲಿ ನ.30 ರಂದು ನಡೆದಿದ್ದ ಯಕ್ಷಗಾನ ಬಯಲಾಟಕ್ಕೆ ಶುಭ ಕೋರುವ ಹಲವು ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಆದರೆ ಏಕಾ ಏಕಿ ಬ್ಯಾನರ್ ಅನ್ನು ಹರಿದು ಕಿತ್ತೆಸೆದ ಘಟನೆ ವರದಿಯಾಗಿದೆ. ಬ್ಯಾನರ್ ತೆರವುಗೊಳಿಸುವ ಮುನ್ನವೇ ಅದನ್ನು ಹರಿದು ಕ್ಷೇತ್ರಕ್ಕೆ ಅಪಮಾನ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಕೃತಿ ಮೆರೆದವರಿಗೆ ಯಾರೇ ಆಗಿದ್ದರೂ ತಪ್ಪೊಪ್ಪಿಕೊಳ್ಳದೆ ಹೋದರೆ ದೈವಗಳ ಮೊರೆ ಹೋಗುವುದಾಗಿ ಯಕ್ಷಗಾನ ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here