ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಿಯ  ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ

0

ಪುತ್ತೂರು: ಡಿ.10ರಿಂದ 11ರ ವರೆಗೆ ನಡೆಯಲಿರುವ ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಿಯ  ಜಾತ್ರೋತ್ಸವ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಡಿ.3ರಂದು ಬೆಳಿಗ್ಗೆ 8.30ಕ್ಕೆ ಜರಗಿತು. 

ದೇವಸ್ಥಾನ ದ ಅಧ್ಯಕ್ಷರಾದ ಗಂಗಾಧರ ಅಮೀನ್ ಹೊಸಮನೆ ಅವರ ತೋಟದಿಂದ ಗೊನೆಗೆ ಪೂಜೆ ನೆರವೇರಿಸಿ ಗೊನೆ ಮುಹೂರ್ತ ಮಾಡಲಾಯಿತು. ದೇವಳದ ತಂತ್ರಿ ಕುಕ್ಕಾಡಿ ಪ್ರೀತಮ್ ಪುತ್ತೂರಾಯರವರು ಗೊನೆ ಮುಹೂರ್ತ ನಡೆಸಿಕೊಟ್ಟರು. ದೇವಸ್ಥಾನದ ಅರ್ಚಕರಾದ ಶ್ರೀ ವತ್ಸ ಭಟ್ ಸಹಕರಿಸಿದರು.


ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಬ್ರಹ್ಮಕಲಶೋತ್ಸವದ ಸಮಿತಿಯ ಅಧ್ಯಕ್ಷ ಸಿ ಟಿ ಸುರೇಶ್, ಕಾರ್ಯದರ್ಶಿ ಜಯಂತ್ ಶೆಟ್ಟಿ ಕಂಬಳತಡ್ಡ, ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷ ಸಂತೋಷ ಸುವರ್ಣ ಮೇರ್ಲ, ಕೃಷ್ಣ ಯುವಕ ಮಂಡಲ ದ ಮಾಜಿ ಅಧ್ಯಕ್ಷ ಲೋಕೇಶ್ ರೈ ಮೇರ್ಲ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪೂರ್ಣಿಮಾ ಶೆಟ್ಟಿ, ,ಶೇಷಪ್ಪ ಗೌಡ (PSI), ಧನಂಜಯ ಶೆಟ್ಟಿ ಮೇರ್ಲ,ಅಶೋಕ್ ಗೌಡ ಬೇಕಲ್ ವಿಲ್ಲಾ ,ಆನಂದ ಅಮೀನ್ ಹೊಸಮನೆ, ಭಾಸ್ಕರ್, ಗೋಪಾಲ ಪೂಜಾರಿ,ನವೀನ್ ಮಜಲುಮನೆ,ಜಯರಾಮ್ ಆಚಾರ್ಯ,ನಯನ ಪ್ರದೀಪ್ ,ಸುಗುಣ,ಶ್ಯಾಮಲಾ ಕುಂಜೂರ್ ಪಂಜ, ಪುಷ್ಪಲತಾ ಗಂಗಾಧರ ಅಮೀನ್, ಸುನಂದ ಜಯರಾಮ್, ನಂದಿನಿ, ಪವನ್ ಶೆಟ್ಟಿ ಕಂಬಳತಡ್ಡ, ಧನುಷ್ ಹೊಸಮನೆ ಹಾಗೂ ಗಣ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here