ಪುತ್ತೂರು: ಮಳೆಯ ಅಡ್ಡಿಯಿಂದಾಗಿ ಸಾಕಷ್ಟು ವಿಳಂಬದ ಅನಂತರ ಪುತ್ತೂರು ನಗರಸಭೆಯ ಮುಖ್ಯರಸ್ತೆ ದುರಸ್ತಿ, ಡಾಮಾರು ಪ್ಯಾಚ್ ವರ್ಕ್ ಕೆಲಸಕ್ಕೆ ಕೊನೆಗೂ ವೇಗ ದೊರೆತಿದೆ.
ನಗರಸಭೆಯಿಂದ ಮುಖ್ಯರಸ್ತೆ ಪ್ಯಾಚ್ ವರ್ಕ್ ಗೆ ಆರಂಭಸಿದ ದಿನ ಮಳೆಯಿಂದಾಗಿ ಕಾಮಗಾರಿಗಳಿಗೆ ಅಡ್ಡಿಯಾಗಿತ್ತು. ಇದೀಗ ಮತ್ತೆ ಮಳೆ ಹಾನಿಯಿಂದಾಗಿ ರಸ್ತೆಯಲ್ಲಿ ಉಂಟಾದ ಗುಂಡಿಗಳ ಮುಚ್ಚುವಿಕೆ ಡಾಮಾರು ಪ್ಯಾಚ್ ವರ್ಕ್ ಕೆಲಸ ಆರಂಭಗೊಂಡಿದೆ. ನಗರಸಭೆಯಿಂದ ಯೋಜನೆ ಕೆಲಸ, ಕಾರ್ಯ ಭರದಿಂದ ಸಾಗುತ್ತಿದೆ.
ಪ್ರತಿ ವಾರ್ಡ್ ರಸ್ತೆ ದುರಸ್ಥಿಗೂ ಪ್ರಸ್ತಾವನೆ:
ನಗರಸಭೆ ಮುಖ್ಯರಸ್ತೆ ಈಗಾಗಲೆ ದುರಸ್ಥಿ ನಡೆಯುತ್ತಿದೆ. ಅದೇ ರೀತಿ ಮುಂದೆ ಪ್ರತಿ ವಾರ್ಡ್ ಗಳಲ್ಲಿನ ಡಾಮಾರು ರಸ್ತೆಗಳ ದುರಸ್ಥಿ ಪ್ಯಾಚ್ ವರ್ಕ್ ಮಾಡಲು ಮಳೆ ಹಾನಿ ಯೋಜನೆಯಲ್ಲಿ ಈಗಾಗಲೇ ಶಾಸಕರ ಮೂಲಕ ಜಿಲ್ಲಾಧಿಕಾರಿಗಳಿಗೆ ರೂ. ೩೦ ಲಕ್ಷ ಅನುದಾನ ನೀಡುವಂತೆ ಪ್ರಸ್ತಾವನೆ ಕಳುಹಿಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ ತಿಳಿಸಿದ್ದಾರೆ.