ಬಿಎಸ್‌ಎಫ್ ಯೋಧೆಯಾಗಿ ಕರ್ಕುಂಜದ ಚೈತ್ರ

0

ಪುತ್ತೂರು:ಭಾರತೀಯ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯಲ್ಲಿ ಕಾನ್‌ಸ್ಟೇಬಲ್ ಆಗಿ ಪುತ್ತೂರಿನ ಕರ್ಕುಂಜದ ಚೈತ್ರ(21ವ.)ರವರು ನೇಮಕವಾಗಿದ್ದಾರೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್-2021ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಚೈತ್ರರವರು ನೇಮಕವಾಗಿದ್ದಾರೆ. 2022ರ ಡಿ.21ರಂದು ಬೆಂಗಳೂರಿನ ಬಿಎಸ್‌ಎಫ್ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಸ್‌ಎಫ್ ಆದೇಶಿಸಿದೆ.

ಬಲ್ನಾಡು ಕರ್ಕುಂಜದ ಲಿಂಗಪ್ಪ ಗೌಡ ಹಾಗೂ ಜಾನಕಿ ದಂಪತಿ ಪುತ್ರಿಯಾಗಿರುವ ಚೈತ್ರರವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ರಾಗಿಕುಮೇರು ಹಿ.ಪ್ರಾ ಶಾಲೆ, ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿ, ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಪೂರೈಸಿರುತ್ತಾರೆ. ಪ್ರಸ್ತುತ ದ್ವಿತೀಯ ವರ್ಷದ ಎಂಎಸ್ಸಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here