ಎಸ್.ಪಿ.ವೈ .ಎಸ್.ಎಸ್ ರವರಿಂದ ಉಪ್ಪಿನಂಗಡಿ ನೇತ್ರಾವತಿ ಸಭಾಭವನದಲ್ಲಿ ಉಚಿತ ಯೋಗ ತರಬೇತಿ ಉದ್ಘಾಟನೆ

0

ಆಲಂಕಾರು: ಪತಂಜಲಿ ಯೋಗ ಶಿಕ್ಷಣ ಸಮಿತಿ ರಿಜಿಸ್ಟರ್ ಕರ್ನಾಟಕ. ನೇತ್ರಾವತಿ ವಲಯ ದಕ್ಷಿಣ ಕನ್ನಡ ಜಿಲ್ಲೆ, ಉಪ್ಪಿನಂಗಡಿ, ಇದರ ವತಿಯಿಂದ ಉಚಿತ ಯೋಗ ತರಭೇತಿ ಕಾರ್ಯಗಾರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾ ಕಾಳಿ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ48 ದಿನಗಳ ಉಚಿತ ಯೋಗ ತರಬೇತಿ ಕಾರ್ಯಗಾರವನ್ನು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಜಯಂತ್ ಪುರೋಳಿ ಉದ್ಘಾಟಿಸಿ ಶುಭಾಹಾರೈಸಿದರು.

ಎಸ್.ಪಿ.ವೈ.ಎಸ್.ಎಸ್.ನ ಪ್ರಮುಖರಾದ ಶಾರದಾ ವಿದ್ಯಾಲಯ ಮಹಾ ಸಂಸ್ಥೆಯ ಉಪ ಪ್ರಾಂಶುಪಾಲರಾದ ದಯಾನಂದ ಕಟೀಲು ರವರು ಮಾತನಾಡಿ ಎಸ್.ಪಿ.ವೈ .ಎಸ್.ಎಸ್ ಕಳೆದ 43 ವರ್ಷ ಗಳಿಂದ ಸಂಸ್ಕಾರ, ಸಂಘಟನೆ ಸೇವೆ ಎಂಬ ಧ್ಯೇಯೋದ್ದೇಶ ದಿಂದ ಯೋಗ ಶಾಖೆಯನ್ನು ಪ್ರಾರಂಭಿಸಿ , ಸಾವಿರಾರು ಯೋಗ ಶಿಕ್ಷಕರನ್ನು ನಿರ್ಮಾಣ ಮಾಡಿ ಲಕ್ಷಾಂತರ ಯೋಗಬಂಧಗಳಿಗೆ ಪ್ರೇರೆಣೆ ನೀಡಿ, ದೇಶ,ವಿದೇಶದ್ಯಾಂತ ಅನೇಕ ಶಾಖೆಗಳನ್ನು ನಡೆಸುತ್ತಾ ಬಂದಿದೆ. ಜನರ ಅಪೇಕ್ಷೆಯಂತೆ ಇದೀಗ ಉಪ್ಪಿನಂಗಡಿಯಲ್ಲಿ ಉಚಿತ ಯೋಗ ತರಭೇತಿ ಪ್ರಾರಂಭಗೊಂಡಿದ್ದು.ಯೋಗ ಶಿಕ್ಷಣ ತರಬೇತಿಯಲ್ಲಿ ಎಲ್ಲರೂ ಭಾಗವಹಿಸಿ ತಮ್ಮ ತಮ್ಮ ಆರೋಗ್ಯವನ್ನು ಸದೃಡಗೊಳಿಸುವಂತೆ ತಿಳಿಸಿದರು.

ಅತಿಥಿಯಾಗಿ ಕಡಬ ಅರಕ್ಷಕ ಠಾಣೆಯ ಸಹಾಯಕ ಉಪನೀರಿಕ್ಷಕ ಕನಕ ರಾಜ್ ರವರು ಮಾತನಾಡಿ ವಿಶ್ವಕ್ಕೆ ಯೋಗವನ್ನು ಪರಿಚಯಿಸಿ ಕೊಟ್ಟ ದೇಶ ಅಂದರೆ ಅದು ನಮ್ಮ ಭಾರತ ದೇಶ .ಇವತ್ತು ಎಲ್ಲಾ ಕಡೆಗಳಲ್ಲಿ , ದೇಶ ,ವಿದೇಶದಲ್ಲೋ ಯೋಗವನ್ನು ಎಲ್ಲಾರೂ ಅಭ್ಯಾಸ ಮಾಡುತ್ತಾರೆ. ಯೋಗಭ್ಯಾಸದಿಂದ ನಮಗೆ ಹಲವು ಪ್ರಯೋಜನಗಳಿದ್ದು. ನಾವು ಶಾರೀರಿಕವಾಗಿ ಹಾಗು ಮಾನಸಿಕವಾಗಿ ಸದೃಡಗೊಳ್ಳುವುದರೊಂದಿಗೆ ನಾವು ಅರೋಗ್ಯವಂತ ಜೀವನ ನಡೆಸಲು ಸಹಕರಿಯಾಗುತ್ತದೆ ಎಂದು ತಿಳಿಸಿದರು.

ಸಭಾ ಅಧ್ಯಕ್ಷತೆ ವಹಿಸಿದ ವಕೀಲರಾದ ಸಂತೋಷ್ ಕುಮಾರ್ ಮಾತನಾಡಿ ಉಪ್ಪಿನಂಗಡಿಯಲ್ಲಿ ಎಸ್.ಪಿ.ವೈ .ಎಸ್ .ಎಸ್ ಕಳೆದ ಎರಡು ವರ್ಷಗಳಿಂದ ಸಂಸ್ಕಾರಯುತ ಯೋಗ ಶಿಕ್ಷಣವನ್ನು ನೀಡುತ್ತಿದ್ದು ದಿನಾಲೂ ನಾನು ಕೂಡ ಅಭ್ಯಾಸ ಮಾಡುತ್ತಿದ್ದು ಅನೇಕ ಮಂದಿ ಬೆಳಿಗ್ಗೆ ಬಂದು ನಿತ್ಯ ನಿರಂತರ ಯೋಗ ಅಭ್ಯಾಸದಲ್ಲಿ ತೊಡಗಿಸಿಕೊಂಡು ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಉಪ್ಪಿನಂಗಡಿಯಲ್ಲಿ ಪ್ರಾರಂಭಗೊಂಡ 48 ದಿವಸದ ಉಚಿತ ಯೋಗ ತರಭೇತಿಯ ಪ್ರಯೋಜನವನ್ನು ಎಲ್ಲಾರೂ ಪಡೆದುಕೊಳ್ಳವಂತೆ ವಿನಂತಿಸಿದರು .

ಉಪ್ಪಿನಂಗಡಿಯ ಯೋಗಬಂಧುಗಳಾದ ಶೋಭಾ ಪ್ರಾರ್ಥಿಸಿ,ಮೋಹಿನಿ ಕಾರ್ಯಕ್ರಮ ನಿರೂಪಿಸಿ,ಕಾವ್ಯರವರು ಸ್ವಾಗತಿಸಿ ಸುಜಾತ ಧನ್ಯವಾದ ಸಮರ್ಪಿಸಿದರು. ಆಶಾರವರು ಯೋಗ ತರಗತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳು ಪಾಲಿಸಬೇಕಾದ ಸೂಚನೆಗಳನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಆನಂದ್ ಬಿ.ಕೆ ಪಿಡಬ್ಲ್ಯೂಡಿ ಗುತ್ತಿಗೆದಾರರು, ಉಪ್ಪಿನಂಗಡಿ ಪಂಚಾಯತ್ ಅಧ್ಯಕ್ಷರಾದ ಉಷಾ ಚಂದ್ರ ಮುಳಿಯ, ಮತ್ತು ಉಪ್ಪಿನಂಗಡಿ ಶಾಖೆಯ ಯೋಗ ಬಂದುಗಳು ಹಾಗು ಪ್ರಮುಖರು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here