ಪುಣೆಯಲ್ಲಿ ಇಂಡಿಯನ್ ನ್ಯಾಷನಲ್ ಸ್ಫ್ರಿಂಟ್ ಚಾಂಪಿಯನ್ ಶಿಪ್ ರ್‍ಯಾಲಿ

0

ಏಸ್ ಮೋಟಾರ್‍ಸ್ ನ ಮ್ಹಾಲಕ ಆಕಾಶ್ ಐತಾಳ್ ಚಾಂಪಿಯನ್

ಪುತ್ತೂರು: ಮಹಾರಾಷ್ಟ್ರದ ಪುಣೆಯಯಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಸ್ಫ್ರಿಂಟ್ ಚಾಂಪಿಯನ್ ಶಿಪ್ ರ್‍ಯಾಲಿಯಲ್ಲಿ ಬೊಳುವಾರು ಏಸ್ ಮೋಟಾರ್‍ಸ್ ನ ಮ್ಹಾಲಕ ಆಕಾಶ್ ಐತಾಳ್ ಚಾಂಪಿಯನ್ ಬುಲೆಟ್ ವಿಭಾಗದಲ್ಲಿ ಪ್ರಥಮ ಹಾಗೂ ಕೆಟಿಎಂ ವಿಭಾಗದಲ್ಲಿ ದ್ವಿತೀಯ ಚಾಂಪಿಯನ್ ಆಗಿದ್ದಾರೆ.

ಪುಣೆಯ ಗುಡ್ಡಗಾಡಿನ ಒರಟಾದ ರಸ್ತೆಯಲ್ಲಿ ನಡೆದ ರ್‍ಯಾಲಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಸುಮಾರು 110 ಮಂದಿ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಬುಲೆಟ್ ವಿಭಾಗದಲ್ಲಿ ಪ್ರಥಮ ಹಾಗೂ ಕೆಟಿಎಂ ವಿಭಾಗದಲ್ಲಿ ದ್ವಿತೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಇವರು ಕಳೆದ ನವಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಡೆದನ್ಯಾಶಷನಲ್ ಸ್ಪ್ರಿಂಟ್ ರ್‍ಯಾಲಿಯಲ್ಲಿ ಆರು ವಿಭಾಗದಲ್ಲಿ ಚಾಂಪಿಯನ್ ಶಿಪ್ ಹಾಗೂ ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆದ ರ್‍ಯಾಲಿಯಲ್ಲಿಯೂ ನ್ಯಾಷನಲ್ ಚಾಂಪಿಯನ್ ಆಗಿದ್ದರು. ಫೆಬ್ರವರಿಯಲ್ಲಿ ಬೆಂಗಳೂರು-ಚಿತ್ರದುರ್ಗಾದ ಮಧ್ಯೆಯ 1250 ಕಿ.ಮೀ ದೂರದ ದಕ್ಷಿಣ್ ಡೇರ್ ಚಾಂಪಿಯನ್ ಶಿಪ್ ಬೈಕ್ ರ್‍ಯಾಲಿಯಲ್ಲಿ 400ಸಿಸಿ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಅಲ್ಲದೆ ಚಂಡೀಗಡದಲ್ಲಿ ನಡೆದ ಸಜೋಬಾ ಚಾಂಪಿಯನ್ ಶಿಪ್ ಬೈಕ್ ರ್‍ಯಾಲಿಯಲ್ಲಿ ವಿದೇಶಿ ಬೈಕ್ ವಿಭಾಗದಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

LEAVE A REPLY

Please enter your comment!
Please enter your name here