ಪುತ್ತೂರು: ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನ.30ರಂದು ನಡೆಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪಿ ಬಿ ಇಂದುಶೇಖರ್‌ರವರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಭಟ್ ಮಾತನಾಡಿದರು. ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್, ಸದಸ್ಯರಾದ ಶಿ ಚಂದ್ರಶೇಖರ್ ಎನ್‌ಎಸ್‌ಡಿ, ಕಮಲೇಶ್ ಎಸ್.ವಿ, ದೈ.ಶಿ.ಸಂಯೋಜಕರಾದ ಸುಂದರ ಗೌಡ, ಶಿಕ್ಷಣ ಇಲಾಖೆಯ ಅಮೃತಕಲಾ, ನರಿಮೊಗರು ಕ್ಲಸ್ಟರ್‌ನ ಸಿಆರ್‌ಪಿ ಪರಮೇಶ್ವರಿ ಪ್ರಸಾದ್‌ರವರು ಶುಭ ಹಾರೈಸಿದರು.
ಹಿರಿಯ ವಿದ್ಯಾರ್ಥಿಗಳಾದ ಲೋಕೆಶ್ ಸುವರ್ಣ ಬಿ ಎಸ್, ಕರುಣಾಕರ ಗೌಡ ಎಲಿಯ, ಮಾಲತಿ ಜಯರಾಂ ಪೂಜಾರಿ, ಎನ್ ಜಗದೀಶ್ ಅಮೀನ್ ನಡುಬೈಲು ಹಾಗೂ ವಿನಯ ಕುಮಾರ್ ರೈಯವರನ್ನು ದಿ| ವೆಂಕಟ್ರಮಣ ಗೌಡರ ಸ್ಮರಣಾರ್ಥ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2021-22 ರ ಸಾಲಿನಲ್ಲಿ 625 ರಲ್ಲಿ 622 ಅಂಕಗಳನ್ನು ಗಳಿಸಿದ ಯಜ್ಞಾ ಎಸ್.ಕೆ ಯವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು. ಮತ್ತು 500 ಕ್ಕಿಂತ ಅಧಿಕ ಅಂಕ ಗಳಿಸಿದ 24 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸೇವಾ ನಿವೃತ್ತಿ ಹೊಂದಿದ ದೇವಣ್ಣ ನಾಯ್ಕ ಜಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಜಯಂತ್ ಬೇಕಲ್, ಕೋಶಾಧಿಕಾರಿ ಶಶಿಧರ್ ಎಸ್ ಡಿ, ಸದಸ್ಯರಾದ ಮಹಾಬಲ ರೈ, ಮೇಲುಸ್ತುವಾರಿ ಸಮಿತಿಯ ಆಧ್ಯಕ್ಷ ಅಶೋಕ್ ಎಸ್.ಡಿ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುರೇಶ್ ಎಸ್.ಡಿ, ಹಿರಿಯ ವಿದ್ಯಾರ್ಥಿ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ, ನಿವೃತ್ತ ಮುಖ್ಯಶಿಕ್ಷಕರಾದ ಶ್ರೀನಿವಾಸ್ ಯಚ್ ಬಿ, ಶಿಕ್ಷಕಿಯರಾದ ಪುಷ್ಪಾ, ಅಕ್ಷತಾ, ಮಧುಶ್ರೀ, ಶೃತಿ, ಪವಿತ್ರ, ಕಛೇರಿ ಸಿಬ್ಬಂದಿ ಜಯಶ್ರೀಯವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಶಾಲಾ ಸಂಚಾಲಕರಾದ ಡಾ| ಯಾದವಿ ಜಯಕುಮಾರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಜಯಶ್ರೀ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.