ಪಡ್ನೂರು ಶ್ರೀರಾಮ್ ಫ್ರೆಂಡ್ಸ್ ದಶಮಾನೋತ್ಸವ ‘ನಮ್ಮೂರ ಹಬ್ಬ’ ಸಮಾರೋಪ

0

ಕ್ರೀಡಾಕೂಟ ಸ್ಪರ್ಧೆಗೆ ಸೀಮಿತವಾಗದೆ ಯುವ ಶಕ್ತಿಯ ಪ್ರದರ್ಶನವಾಗಲಿ-ಸಂಜೀವ ಮಠಂದೂರು

ಪುತ್ತೂರು:ಕ್ರೀಡಾ ಕೂಟ ಕೇವಲ ಸ್ಪರ್ಧೆಗೆ ಸೀಮಿತ ಅಲ್ಲ.ಎಲ್ಲಾ ಯುವಕರ ಮನಸ್ಸು ಒಂದು ಮಾಡುವಂತಹದ್ದು ಮತ್ತು ಯುವ ಶಕ್ತಿಯ ಪ್ರದರ್ಶನ ಮಾಡುವಂತಹ ಕಾರ್ಯ ಆಗಬೇಕು. ಯುವ ಶಕ್ತಿ ರಾಷ್ಟ್ರಶಕ್ತಿಯನ್ನಾಗಿ ಮಾಡುವುದು ಕ್ರೀಡಾಕೂಟದ ಉದ್ದೇಶ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕಳೆದ ಹಲವು ವರ್ಷಗಳಿಂದ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ಪಡ್ನೂರಿನ ಶ್ರೀರಾಮ್ ಫ್ರೆಂಡ್ಸ್‌ನ ದಶಮಾನೋತ್ಸವದ ಪ್ರಯುಕ್ತ ‘ನಮ್ಮೂರ ಹಬ್ಬ’ದಲ್ಲಿ ದ.4ರಂದು ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇವತ್ತು ಮತಾಂಧ ವ್ಯಕ್ತಿಗಳು ಸಮಾಜಘಾತುಕ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಅರಾಜಕತೆ, ಭಯೋತ್ಪಾದಕತೆ, ಮತಾಂತರ ಮಾಡುವ ಮೂಲಕ ಹಿಂದು ಸಮಾಜಕ್ಕೆ ಸವಾಲಾಗಿರುವ ಸಂದರ್ಭದಲ್ಲಿ ಹಿಂದು ಸಮಾಜದ ಯುವಕರು ಇವೆಲ್ಲವನ್ನು ಸವಾಲಾಗಿ ಸ್ವೀಕರಿಸುವ ಕೆಲಸ ಕ್ರೀಡಾ ಕೂಟದ ಮೂಲಕ ಮಾಡಬೇಕಾಗಿದೆ.ಕ್ರೀಡಾ ಕೂಟ ಸ್ಪರ್ಧೆಗೆ ಸೀಮಿತವಾಗದೆ ಯುವ ಶಕ್ತಿಯ ಪ್ರದರ್ಶನ ಮಾಡಬೇಕಾಗಿದೆ.ಮತ್ತೊಮ್ಮೆ ಹಿಂದು ಯುವ ಶಕ್ತಿ ರಾಷ್ಟ್ರಶಕ್ತಿಯನ್ನಾಗಿ ಮಾಡುವುದು ಕ್ರೀಡಾಕೂಟದ ಉದ್ದೇಶ.ಕ್ರೀಡಾಕೂಟದ ಮೂಲಕ ರಾಷ್ಟ್ರದ ಹಿರಿಮೆ, ಗರಿಮೆ ಹೆಚ್ಚಿಸಬಹುದು ಎಂದು ಹೇಳಿದರು.ರಾಮನ ಆದರ್ಶ, ಸಾವರ್ಕರ್ ಅವರ ರಾಷ್ಟ್ರಪ್ರೇಮ, ಕೇಶವ ಬಜತ್ತೂರು, ಕರುಣಾಕರ ಪೆರ‍್ವೋಡಿ, ಉದಯ ಪೆರ‍್ವೋಡಿ, ಡೀಕಯ್ಯ ಪೆರ‍್ವೋಡಿ ಅವರಂತಹ ದೇಶ ಪ್ರೇಮಿಗಳಾಗಿ ರಾಷ್ಟ್ರಭಕ್ತರಾಗಬೇಕೆಂಬ ನಿಟ್ಟಿನಲ್ಲಿ ಕಬಡ್ಡಿ ಪಂದ್ಯಾಟ ನಡೆಯುತ್ತಿರುವುದು ಮಾದರಿ ಕೆಲಸ ಎಂದ ಅವರು, ಯುವ ಸಮಾಜ ಜೋಡಿಸುವ ಕೆಲಸ ಪಡ್ನೂರಿನ ಯುವಕರು ಮಾಡುತ್ತಿದ್ದಾರೆ ಎಂದರಲ್ಲದೆ,ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಕಣ್ಣೀರು ಒರೆಸುವ ಮತ್ತು ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡುವ ಕೈಂಕರ್ಯವನ್ನು ಇಲ್ಲಿನ ಯುವಕರು ಮಾಡಬೇಕೆಂದು ವಿನಂತಿಸಿದರು.

ಹಿಂದುತ್ವದ ಕಾರ್ಯಕ್ರಮದಲ್ಲಿ ಪಡ್ನೂರು ಮಾದರಿ:

ಕರಾವಳಿ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ ಯುವಕರಿಗೆ ಪ್ರೇರಣಾದಾಯಕವಾಗಿ ಪಡ್ನೂರಿನಲ್ಲಿ ಸಂಘಟನೆ ಬೆಳೆದಿದೆ.ಹಿಂದುಗಳಿಗೆ ಸಮಸ್ಯೆ ಬಂದಾಗ ಎಲ್ಲರೂ ಒಗ್ಗೂಡಬೇಕು.ಸಂಸ್ಕಾರ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಪಡ್ನೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಉತ್ತಮ ಜೋಡಣೆಯಾಗಿದೆ.ಇಂತಹ ಕಾರ್ಯಕ್ರಮ ಮಾದರಿಯಾಗಿದ್ದು, ಇದನ್ನು ನಮ್ಮೆಲ್ಲಾ ಹಿಂದು ಸಮಾಜದ ಕಾರ್ಯಕ್ರಮದಲ್ಲಿ ಆಯೋಜನೆ ಮಾಡಬೇಕು ಎಂದರು.

ಶ್ರೀರಾಮ ಫ್ರೆಂಡ್ಸ್‌ನಿಂದ ಹಿಂದು ಸಮಾಜಕ್ಕೆ ರಕ್ಷಣೆ:

ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಸಂಘಟನೆಯ ಆಧಾರದಲ್ಲಿ ನಮ್ಮ ಬದುಕಿನಲ್ಲಿ ಕೃತಾರ್ಥತೆಯನ್ನು ಪಡೆಯಬೇಕೆಂಬ ಆಶಯದ ಜೊತೆಗೆ ಸನಾತನವಾಗಿರುವ ಧರ್ಮ ಪರಂಪರೆಯನ್ನು ಉಳಿಸುವ ಕಾಳಜಿಯಲ್ಲಿ ಹುಟ್ಟಿಕೊಂಡ ‘ಶ್ರೀರಾಮ ಫ್ರೆಂಡ್ಸ್’ ಅನೇಕ ಸವಾಲು, ಸಂಘರ್ಷ, ಹೋರಾಟ, ಅವಮಾನ, ಅಪಮಾನವನ್ನು ಸಹಿಸಿಕೊಂಡು ಸಂಘಟನೆ ಇವತ್ತು ಸಮಾಜದಲ್ಲಿ ಸದೃಢವಾಗಿ ಬೆಳೆದಿದೆ.ಸಮಾಜಕ್ಕೆ ಅನ್ಯಾಯವಾಗಿರುವ ಸಂದರ್ಭದಲ್ಲಿ ಸವಾಲುಗಳನ್ನು ಯಶಸ್ವಿಯಾಗಿ ಸ್ವೀಕರಿಸಿ ಸಾಮಾಜಿಕ ನ್ಯಾಯವನ್ನು ಈ ಭಾಗದ ಜನರಿಗೆ ಕೊಡಿಸಿದ ಸಂಘಟನೆ ಇದಾಗಿದ್ದು ಸಾಮಾಜಿಕ ಪರಿಕಲ್ಪನೆಯ ಆಧಾರದಲ್ಲಿ ರಾಷ್ಟ್ರದಲ್ಲಿ ಸದೃಢವಾಗಿರುವ ಶಕ್ತಿ ಬೆಳೆಯುವ ಯೋಚನೆಯಲ್ಲಿ ರಾಷ್ಟ್ರದ ಧರ್ಮದ ರಕ್ಷಣೆ ಮಾಡುವ ಪಕ್ಷಕ್ಕೆ ಸಹಕಾರ ನೀಡುವ ಚಿಂತನೆಯಲ್ಲಿ ಧರ್ಮವನ್ನು ರಕ್ಷಣೆ ಮಾಡುವ ಬಿಜೆಪಿಗೆ ಸಹಕಾರ ಕೊಡುವ ಮೂಲಕ ಹಿಂದು ಸಮಾಜಕ್ಕೆ ರಕ್ಷಣೆ ನೀಡುವ ಕೆಲಸವನ್ನು ಮಾಡುತ್ತಿದೆ ಎಂದರು.

ಧರ್ಮ ಜಾಗೃತಿ ನಿರಂತವಾಗಿರಲಿ:

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಹಿಂದು ಸಮಾಜದ ಸಂಸ್ಕಾರ, ಸಂಸ್ಕೃತಿ ಪ್ರತಿಬಿಂಬಿಸುವ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ. ಮುಂದೆ ಇಲ್ಲಿ ನಿರಂತರ ಸಮಾಜಕ್ಕೆ ಪೂರಕವಾಗದ ಕೆಲಸ ಆಗಲಿ.ಊರಿನ, ಸಮಾಜಕ್ಕಾಗಿ ದುಡಿದ ಜಿ.ಪಂ.ಸದಸ್ಯರಾಗಿದ್ದ ಕೇಶವ ಬಜತ್ತೂರು ಹಾಗು ಪೆರ‍್ವೋಡಿ ಕುಟುಂಬಸ್ಥರ ನೆನಪಿನಲ್ಲಿ ನಡೆಯುವ ಈ ಕಾರ್ಯಕ್ರಮ ಮುಂದಿನ ಪೀಳಿಗೆಗೆ ಈ ಭಾಗದಲ್ಲಿ ಯಾವ ರೀತಿ ಹಿಂದೂ ಸಂಘಟನಾ ಕಾರ್ಯಕ್ರಮ ನಡೆದಿದೆ ಎಂಬುದಕ್ಕೆ ಇಂತಹ ಕಾರ್ಯಕ್ರಮ ಅಗತ್ಯ.ಸಮಾಜದಲ್ಲಿ ಇಂತಹ ಕಾರ್ಯಕ್ರಮದ ಮೂಲಕ ಧರ್ಮಜಾಗೃತಿ ಆಗಲಿದೆ ಎಂದರು.


ಶ್ರೀರಾಮ ಫ್ರೆಂಡ್ಸ್‌ನ ಕಾರ್ಯಕ್ರಮದೊಂದಿಗೆ ನಾನಿದ್ದೇನೆ:

ಮುಂಬೈನ ಗಿರಿಜಾ ವೆಲ್‌ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ವಸಂತ ಸಪಲ್ಯ ಕುಂಜಾರು ಅವರು ಮಾತನಾಡಿ ಇವತ್ತು ಪಡ್ನೂರಿನಲ್ಲಿ ನಡೆಯುವ ಹಿಂದುತ್ವ ಆಧಾರದ ಕಾರ್ಯಕ್ರಮವನ್ನು ರಾಜ್ಯವೇ ನೋಡುವ ಕೆಲಸ ಆಗಿದೆ.ಮುಂದಿನ ದಿನವೂ ಶ್ರೀರಾಮ್ ಫ್ರೆಂಡ್ಸ್ ಯಾವುದೇ ಕಾರ್ಯಕ್ರಮ ಮಾಡಿದರೂ ಅವರೊಂದಿಗೆ ನಾನು ಜೊತೆಯಲ್ಲಿದ್ದೇನೆ ಎಂದರು.

ನಮ್ಮ ಯುವಕರಿಗೆ ಪರಿವಾರದ ಸಂಸ್ಥೆಯಿಂದ ಕೆಲಸ ಕೊಡಿಸಿ:

ಮುಗೇರ ಜವನೆರ ಕೂಟದ ಅಧ್ಯಕ್ಷ ವಿಜಯ್ ವಿಕ್ರಮ್ ಅವರು ಮಾತನಾಡಿ ಶ್ರೀರಾಮ ಫ್ರೆಂಡ್ಸ್ ಇವತ್ತು ಬಹಳ ಬಲಿಷ್ಠವಾಗಿ ಬೆಳೆದಿದೆ.ನಾನು ಧ್ವನಿ ಎತ್ತಿ ಮಾತನಾಡಲು ಕೂಡಾ ಇಲ್ಲಿನ ಯುವಕರ ತಂಡ ಸಹಕಾರ ನೀಡಿದೆ.ಈ ಭಾಗದಲ್ಲಿ ನಮ್ಮ ಯುವಕರಲ್ಲಿ ಬಹುತೇಕ ಕೆಲಸ ಇಲ್ಲದೆ ಕೂಲಿ ಕೆಲಸಕ್ಕೆ ಹೋಗುವವರಿದ್ದಾರೆ.ಅವರಿಗೆ ಪರಿವಾರ ಸಂಸ್ಥೆಯಾಗಿಗುವ ಕ್ಯಾಂಪ್ಕೋ ಸಹಿತ ಇತರ ಸಂಸ್ಥೆಗಳಲ್ಲಿ ಕೆಲಸ ಕೊಡಿಸಿದರೆ ಉತ್ತಮ ಎಂದರು.ಇವತ್ತು ಕೆಳವರ್ಗದ ಜನರನ್ನು ಬ್ರೈನ್‌ವಾಶ್ ಮಾಡಿ ಮತಾಂತರ ಮಾಡುವ ಹುನ್ನಾರ ನಡೆಯುತ್ತಿದೆ.ಈ ಸಂದರ್ಭದಲ್ಲಿ ಮುಂದೆ ಜ.೭ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಧಾರ್ಮಿಕ ಸಭೆ ಭಾಗವಾಗಿ ಯಕ್ಷಗಾನ ನಡೆಯಲಿದೆ.ಅದರಲ್ಲಿ ಎಲ್ಲರು ಭಾಗವಹಿಸುವಂತೆ ಅವರು ವಿನಂತಿಸಿದರು.

ಸನ್ಮಾನ:

‘ಚಾ ಪರ‍್ಕ ಕಲಾವಿದರು’ ತಂಡದ ಕಲಾವಿದ, ಚಿತ್ರನಟ ದೇವದಾಸ್ ಕಾಪಿಕಾಡ್ ಮತ್ತು ಕಬಡ್ಡಿ ಪಂದ್ಯಾಟದ ತೀರ್ಪುಗಾರ ಗಣೇಶ್ ಅವರನ್ನು ಶ್ರೀರಾಮ್ ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀರಾಮ್ ಫ್ರೆಂಡ್ಸ್‌ನ ಸ್ಥಾಪಕ ಅಧ್ಯಕ್ಷ ನವೀನ್ ಪಡ್ನೂರು ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ದಿ. ಕೇಶವ ಬಜತ್ತೂರು ಅವರ ಪತ್ನಿ ಪುಷ್ಪಾ, ಬಿಜೆಪಿ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು, ಕ್ಲಾಸ್-1 ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ರಾಕೇಶ್ ಕುಮಾರ್ ಪರ್ಲಡ್ಕ, ಶ್ರೀರಾಮ್ -ಂಡ್ಸ್‌ನ ಪ್ರಧಾನ ಕಾರ್ಯದರ್ಶಿ ಶಿಶಿರ್ ಪೆರ್ವೋಡಿ, ಶ್ರೀರಾಮ್ ಫ್ರೆಂಡ್ಸ್ ಪಡ್ನೂರು ಇದರ ಗೌರವ ಸಲಹೆಗಾರ ಶ್ರೀನಿವಾಸ ಪೆರ್ವೋಡಿ, ಕಾರ್ಯದರ್ಶಿ ಸುಹಾನ್ ಉಪಸ್ಥಿತರಿದ್ದರು. ಕಾರ್ತಿಕ್ ಪೆರ್ವೋಡಿ, ತೇಜಾಕ್ಷ ಕೆದಿಲಾಯ, ಸುಜಿತ್, ಕಾರ್ತಿಕ್ ಅಂಡೆಪುಣಿ, ಹರೀಶ್ ಕೆದಿಲಾಯ, ಸಂದೀಪ್, ಸಾತ್ವಿಕ್, ಕಿರಣ್ ಪಂಜಿಗುಡ್ಡೆ,ಗ್ರಾ.ಪಂ ಮಾಜಿ ಅಧ್ಯಕ್ಷೆ ರಮಣಿ ಡಿ ಗಾಣಿಗ ಅತಿಥಿಗಳನ್ನು ಗೌರವಿಸಿದರು. ಶಶಿಕಲಾ ಕುಂಜಾರು ಪ್ರಾರ್ಥಿಸಿದರು.ಶ್ರೀರಾಮ್ ಫ್ರೆಂಡ್ಸ್‌ನ ಗೌರವಾಧ್ಯಕ್ಷ ನವೀನ್ ಪಡ್ನೂರು ಸ್ವಾಗತಿಸಿದರು. ಕೀರ್ತಿ ಕುಂಜಾರು ವಂದಿಸಿದರು. ಶ್ರೀಧರ್ ಕುಂಜಾರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು.ಬಳಿಕ ಕಬಡ್ಡಿಯ ಅಂತಿಮ ಪಂದ್ಯಾಟ ಪ್ರದರ್ಶನಗೊಂಡಿತ್ತು.ಬಳಿಕ ದೇವದಾಸ್ ಕಾಪಿಕಾಡ್ ಅಭಿನಯದ ಚಾಪರ‍್ಕ ಕಲಾವಿದರಿಂದ ನಾಯಿದ ಬೀಲ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

ಮಾತೆಯರಿಗೆ ಅರಸಿನ ಕುಂಕುಮ, ಗಾಜಿನ ಬಳೆ ನೀಡಿ ಸ್ವಾಗತ

ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಗೆ ಮಾತೆಯರು ಅರಸಿನ ಕುಂಕುಮ ಮತ್ತು ಗಾಜಿನ ಬಳೆ, ಹೂವು ನೀಡಿ ಸ್ವಾಗತಿಸುವ ಕಾರ್ಯಕ್ರಮ ನಡೆಯಿತು. ಡಿ.3ರಂದು ದಿ|ಕೇಶವ ಗೌಡ ಬಜತ್ತೂರು ವೇದಿಕೆಯಲ್ಲಿ ಮಹಾವೀರ ಮೆಡಿಕಲ್ ಸೆಂಟರ್ ಪುತ್ತೂರು ಮತ್ತು ಮಂಗಳೂರಿನ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರ, ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಿಂದೂ ಬಾಂಧವರಿಗಾಗಿ ಪುರುಷರ ಹೊನಲು ಬೆಳಕಿನ 55 ಕೆ.ಜಿ ವಿಭಾಗದ ಮತ್ತು ಸೂರ್ಯ ಬೆಳಕಿನ ಮುಕ್ತ ವಿಭಾಗದ ಪ್ರೊ|ಮಾದರಿಯ ಕಬಡ್ಡಿ ಪಂದ್ಯಾಟ ‘ವೀರ ಸಾವರ್ಕರ್ ಟ್ರೋಫಿ-2022’ ಕರುಣೋದಯ ಮ್ಯಾಟ್ ಅಂಕಣದಲ್ಲಿ ನಡೆಯಿತು.

ಸಂಘಟನೆ ಶಕ್ತಿ ಶಾಲಿಯಾಗಿ ಬೆಳೆದಿದೆ

ಪಡ್ನೂರು ಭಾಗದಲ್ಲಿ ದಿ.ಕೇಶವ ಬಜತ್ತೂರು ಅವರು ಜಿ.ಪಂ ಸದಸ್ಯರಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ನಮ್ಮ ಹೋರಾಟಕ್ಕೆ ಕೈ ಜೋಡಿಸಿದವರು.ಗ್ರಾಮದ ರಸ್ತೆ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ.ಅದೇ ರೀತಿ ಗ್ರಾಮದ ಯುವಕರಿಗೆ ಕ್ರೀಡೆ, ಸಂಘಟನೆಗೆ ಮಾರ್ಗದರ್ಶನ ನೀಡಿದ ದಿ.ಕರುಣಾಕರ ಪೆರ‍್ವೋಡಿ, ಯುವಕರಿಗೆ ಪ್ರೇರಣಾದಾಯಕರಾಗಿದ್ದ ದಿ.ಉದಯಕುಮಾರ್ ಪೆರ‍್ವೋಡಿ ಮತ್ತು ದಿ.ಡೀಕಯ್ಯ ಪೆರ‍್ವೋಡಿ ಅವರೆಲ್ಲರ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ಪಡ್ನೂರು ರಾಜಕಾರಣದಲ್ಲಿ ಮಹತ್ವದ ಪಾತ್ರವಿದೆ.ಹಿಂದುತ್ವದ ಆಧಾರದಲ್ಲಿ ದೇಶ ಸೇವೆಗೆ ಬದ್ಧವಾಗಿರುವ ಯುವಕರ ತಂಡ ಇಲ್ಲಿದೆ.ನಮ್ಮ ಸಂಘಟನೆಗೆ ಪ್ರಾರಂಭದಲ್ಲಿ ತೊಂದರೆ ಉಂಟಾಗುತ್ತಿದ್ದರೂ ಇವತ್ತು ಬಹಳ ಶಕ್ತಿಶಾಲಿಯಾಗಿ ಬೆಳೆದಿದೆ.ಕಬಡ್ಡಿ ಪಂದ್ಯಾಟ ಕೇವಲ ಡೊಂಬರಾಟ ಆಗಬಾರದು ಎಂಬ ನಮ್ಮ ನಾಯಕರ ಸಲಹೆಯಂತೆ ನಾಯಕತ್ವ ಗುರಿ ನಮ್ಮ ಮುಂದಿದೆ-

ನವೀನ್ ಪಡ್ನೂರು, ಗೌರವಾಧ್ಯಕ್ಷರು ಶ್ರೀರಾಮ ಫ್ರೆಂಡ್ಸ್ ಪಡ್ನೂರು

LEAVE A REPLY

Please enter your comment!
Please enter your name here