34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, ವಿವಿಧ ಸವಲತ್ತುಗಳ ವಿತರಣೆ ಸಮಾರಂಭ

0

ಉಪ್ಪಿನಂಗಡಿ: ಇಲ್ಲಿನ 34-ನೆಕ್ಕಿಲಾಡಿ ಗಾಮ ಪಂಚಾಯಿತಿಯಲ್ಲಿ ಹರ್ ಘರ್ ಜಲ್ ಘೋಷಣೆ ಜಲಜೀವನ್ ಮಿಷನ್ (ಮನೆ ಮನೆಗೆ ಗಂಗೆ) ಉದ್ಘಾಟನೆ ಮತ್ತು ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ವಿವಿಧ ಸವಲತ್ತುಗಳ ವಿತರಣೆ ಸಮಾರಂಭ ಡಿ. 4ರಂದು ಜರಗಿತು.

ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ ನದಿ ನೀರಿನಿಂದ ಜಲಸಿರಿ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಡಿ.ಪಿ.ಆರ್. ಆಗಿ ಸರಕಾರದ ಮಟ್ಟದಲ್ಲಿ ಕಾರ್ಯಗತವಾಗಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಕಾರ‍್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ರೂಪ್ಲಾ ನಾಯಕ್ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ದ.ಕ.ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಸಹಾಯಕ ಇಂಜಿನಿಯರ್ ಸಂದೀಪ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಭತ್ತ ಬೇಸಾಯಕ್ಕೆ ಉತ್ತೇಜನ ನೀಡಲು 8 ಫಲಾನುಭವಿಗಳಿಗೆ ತಲಾ 1 ಸಾವಿರ ರೂಪಾಯಿ ಪ್ರೋತ್ಸಾಹ ಧನ, ಪ.ಜಾತಿ/ಪ. ಪಂಗಡದ ಹಾಗೂ ವಿಕಲಚೇತನರಿಗೆ 23 ಫಲಾನುಭವಿಗಳಿಗೆ ತಲಾ 1 ಸಾವಿರ ಲೀಟರಿನ ನೀರಿನ ಟ್ಯಾಂಕಿಯನ್ನು ವಿತರಿಸಲಾಯಿತು. ಸೋಲಾರ್ ಫಲಾನುಭವಿಗಳಿಗೆ ಸೋಲಾರ್ ಕಿಟ್‌ನ್ನು ಶಾಸಕರು ವಿತರಿಸಿದರು.

ಸಮಾರಂಭದಲ್ಲಿ ಮಹಾವಿಷ್ಣು ದೇವಸ್ಥಾನದ ಮುಕ್ತೇಸರ ಯು.ಜಿ. ರಾಧ, ಕೋಡಿಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಅತ್ರಮಜಲು, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶೇಕಬ್ಬ, ಆಸ್ಕರ್ ಆಲಿ, ಅಮಿತಾ ಹರೀಶ್, ಜಲ ಜೀವನ್ ಮಿಷನ್‌ನ ಮಹಂತೇಶ್ ಹಿರೇಮಠ್, ಶಿವರಾಂ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ವಪ್ನ, ಸದಸ್ಯರಾದ ವಿಜಯಕುಮಾರ್, ಹರೀಶ್ ಡಿ., ಹರೀಶ್ ಕುಲಾಲ್, ರಮೇಶ ನಾಯ್ಕ್, ಗೀತಾ, ವೇದಾವತಿ, ತುಳಸಿ, ಆರ್. ಸುಜಾತ ರೈ, ರತ್ನಾವತಿ, ಸ್ಮಡಿ.ಪಿ.ಎಂ. ವಿಘ್ನೇಶ್ ರಾಜ್, ಗುತ್ತಿಗೆದಾರ ಅನಿಲ್ ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ ಬಂಗೇರ ಸ್ವಾಗತಿಸಿ, ಲೆಕ್ಕ ಸಹಾಯಕ ದೇವಪ್ಪ ನಾಯ್ಕ ವಂದಿಸಿದರು. ಸಿಬ್ಬಂದಿಗಳಾದ ವಸಂತಿ, ಸುಶೀಲಾ, ಶರೀಕಾ, ಚಿತ್ರಾವತಿ, ಯಶೋಧ ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು. ಉದಯ ಭಾಸ್ಕರ ಸುಳ್ಯ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here