ಕುಂದಾಪುರದಲ್ಲಿ ನಡೆದ ಬೆಸ್ಟ್ ಫಿಸಿಕ್ ಬಿಲ್ಡಿಂಗ್ ಸ್ಪರ್ಧೆ: ಪುತ್ತೂರಿನ ನಿಶಾಂತ್ ಆರ್.ಎಚ್.ರವರಿಗೆ ಬೆಳ್ಳಿ ಪದಕ

0

ಪುತ್ತೂರು: ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ನಡೆದ `Best physic body Building ಸ್ಪರ್ಧೆಯಲ್ಲಿ ಭಾಗವಹಿಸಿದ Waves Fitness,, ಪುತ್ತೂರು, ಪಡೀಲ್ ಇದರ ನಿಶಾಂತ್ ಆರ್.ಎಚ್ ಅವರು ಬೆಳ್ಳಿಯ ಪದಕ ಪಡೆದಿದ್ದಾರೆ.


ಇವರು ದಕ್ಷಿಣ ಕನ್ನಡ 2019 ಚಾಂಪಿಯನ್ ಮತ್ತು ಡಬ್ಲ್ಯುಎಫ್ ಎಫ್ ಏಷ್ಯಾ ಪೆಸಿಫಿಕ್ 2019ರ ವಿಜೇತ ಸಚಿನ್ ರೈ ಪುತ್ತೂರು ರವರಿಂದ ತರಬೇತಿ ಪಡೆದಿರುತ್ತಾರೆ.


ಇವರು ಸಾಲ್ಮರ ಮಹಾಸತಿನಗರದ ರವೀಂದ್ರ ಸಿ.ಎಚ್ ಮತ್ತು ಮೇನಕಾ ದಂಪತಿಯ ಪುತ್ರ.
ನಿಶಾಂತ್‌ರವರು ಬೆಂಗಳೂರಿನಲ್ಲಿ ನಡೆದ ಡಬ್ಲ್ಯುಎಫ್‌ಎಫ್ ಇಂಡಿಯಾ ಚಾಂಪಿಯನ್ ಶಿಫ್‌ನಲ್ಲಿ 19ವರ್ಷದೊಳಗಿನ ದೇಹದಾಡ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಕಂಚಿನ ಪದಕವನ್ನು ಪಡೆದುಕೊಂಡಿದ್ದರು.

LEAVE A REPLY

Please enter your comment!
Please enter your name here