ನೆಲ್ಯಾಡಿ: ಬಲ್ಯ ರಾಮನಗರ ಅಮೆತ್ತಿಮಾರುಗುತ್ತು ಶ್ರೀ ನಾವಲ್ಲಿ ನಾಗದೇವರು, ಶ್ರೀ ರಕ್ತೇಶ್ವರೀ ಗುಳಿಗದೈವ, ಶ್ರೀ ನಾವಲ್ಲಿ ಪಂಜುರ್ಲಿ, ಶ್ರೀ ಕಲ್ಲುರ್ಟಿ ಮತ್ತು ಪಾತ್ರಾಜೆ ಶ್ರೀ ಪಂಜುರ್ಲಿ ದೈವಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಡಿ.9ರಂದು ವೆಂಕಟೇಶ ಭಟ್ ಗಡಿಕಲ್ಲುರವರ ನೇತೃತ್ವದಲ್ಲಿ ನಡೆಯಲಿದೆ.
ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಶ್ರೀ ನಾವಲ್ಲಿ ನಾಗದೇವರಿಗೆ ತಂಬಿಲಸೇವೆ, ಶ್ರೀ ಪಾತ್ರಾಜೆ ಪಂಜುರ್ಲಿ ದೈವದ ತಂಬಿಲ, ಶ್ರೀ ನಾವಲ್ಲಿ ಪಂಜುರ್ಲಿ, ಶ್ರೀ ಕಲ್ಲುರ್ಟಿ ದೈವಗಳಿಗೆ ತಂಬಿಲ, ಮಧ್ಯಾಹ್ನ ಶ್ರೀ ಅಮೆತ್ತಿಮಾರುಗುತ್ತು ರಕ್ತೇಶ್ವರೀ ಮತ್ತು ಗುಳಿಗ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. ಬಲ್ಯ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮವೂ ನಡೆಯಲಿದೆ.
ಸನ್ಮಾನ:
ಮಧ್ಯಾಹ್ನ ಯಕ್ಷಗಾನ ಅರ್ಥದಾರಿ, ಶ್ರೀ ರಾಮಕುಂಜೇಶ್ವರ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯ ಅವರಿಗೆ ಸನ್ಮಾನ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ, ಶ್ರೀ ವಿನಾಯಕ ಯಕ್ಷಗಾನ ಮಂಡಳಿ ರಾಮನಗರ, ಬಲ್ಯ-ನೆಲ್ಯಾಡಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ‘ಯಕ್ಷಗಾನ ತಾಳಮದ್ದಲೆ ‘ ಶ್ರೀ ತರಣಿ ಸೇನ ಕಾಳಗ’ ನಡೆಯಲಿದೆ ಎಂದು ಅಮೆತ್ತಿಮಾರುಗುತ್ತು ಯಜಮಾನ ಸುಂದರ ಶೆಟ್ಟಿ, ಅಮೆತ್ತಿಮಾರುಗುತ್ತು ಗಂಗಾಧರ ಶೆಟ್ಟಿ ಹೊಸಮನೆ, ನಾವಲ್ಲಿ ನಾಗದೇವರ ಸೇವಾಕರ್ತರಾದ ಶ್ರೀ ನಾಲ್ಗುತ್ತು ರಮೇಶ ಗೌಡ, ಕೊರಗಪ್ಪ ರೈ ಕುರುಬರಕೇರಿ, ಪಾತ್ರಾಜೆ ಕೃಷ್ಣಪ್ಪ ಗೌಡ ಹಾಗೂ ಶ್ರೀ ದೈವಗಳ ಆರಾಧನೆಗೆ ಸಂಬಂಧಪಟ್ಟ ಕೂಡುಕಟ್ಟಿನ ಮನೆಯವರು ತಿಳಿಸಿದ್ದಾರೆ.