ಸರಕಾರದ ವಿವಿಧ ಕಾಮಗಾರಿಗಳಲ್ಲಿ ಜನಪ್ರತಿನಿಧಿಗಳ ಪ್ರಚಾರದ ಬ್ಯಾನರ್ ನಿರ್ಬಂಧಿಸುವಂತೆ ನಗರಸಭೆ ಮಾಜಿ ಸದಸ್ಯ ಹೆಚ್.ಮೊಹಮ್ಮದ್ ಆಲಿ ಮನವಿ

0

ಪುತ್ತೂರು: ಸರ್ವೋಚ್ಚ ನ್ಯಾಯಲಯ ಆದೇಶದಂತೆ ಸರಕಾರದ ವಿವಿಧ ಕಾಮಗಾರಿಗಳ ಬಗ್ಗೆ ಜನಪ್ರತಿನಿಧಿಗಳ ಫೋಟೋ ಹಾಗೂ ಹೆಸರು ಅಳವಡಿಸಿ ಪ್ರಚುರಪಡಿಸುವ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ನಿರ್ಬಂಧಿಸುವಂತೆ ಎಚ್ ಮಹಮ್ಮದ್ ಅಲಿ ಅವರು ಪುತ್ತೂರು ತಾ.ಪಂ ಮತ್ತು ನಗರಸಭೆಗೆ ಮನವಿ ಮಾಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 13/2003 ದಿನಾಂಕ 15/5/2015 ಹಾಗೂ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 7135/2021 ರಂತೆ ಹೊರಡಿಸಿರುವ ಆದೇಶದಲ್ಲಿ ಕೇಂದ್ರ ಹಾಗೂ ರಾಜ್ಯಸರಕಾರದ ಮತ್ತು ಸ್ಥಳೀಯ ಸಂಸ್ಥೆಗಳ ಅನುದಾನಗಳಿಂದ ಅನುಷ್ಠಾನಗೊಳಿಸುವ ಯೋಜನೆಗಳು ಹಾಗೂ ನಿರ್ವಹಿಸುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಜನಪ್ರತಿನಿಧಿಗಳ ಹಾಗೂ ರಾಜಕೀಯ ಪಕ್ಷದ ಪದಾಧಿಕಾರಿಗಳ ಬಾವಚಿತ್ರ ಮತ್ತು ಹೆಸರನ್ನು ಅಳವಡಿಸಿ ಪ್ರಚುರಪಡಿಸದಂತೆ ನಿರ್ಬಂಧ ವಿಧಿಸಲಾಗಿರುತ್ತದೆ. ಈ ಕುರಿತು ನ್ಯಾಯಲಯದ ಆದೇಶವನ್ನು ಉಲ್ಲಂಘನೆ ಮಾಡಿ ಬ್ಯಾನರ್ ಮತ್ತು ಫ್ಲೆಕ್ಸ್ ಅಳವಡಿಸಿದಲ್ಲಿ ಅಂತವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸುವಂತೆ ಇದಕ್ಕೆ ತಪ್ಪಿದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಜರುಗಿಸಲಾಗುವುದು ಎಂದು ಸರಕಾರ ಕಠಿಣ ಎಚ್ಚರಿಕೆ ನೀಡಿ ಎಲ್ಲಾ ಇಲಾಖೆಗೆ ಸುತ್ತೋಲೆ ಕಳುಹಿಸಿರುತ್ತದೆ. ಹಾಗಿದ್ದರೂ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಹಾಗೂ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಅಧ್ಯಕ್ಷರ ಮತ್ತು ಸದಸ್ಯರ, ನಗರ ಸಭಾ ಅಧ್ಯಕ್ಷರ ಮತ್ತು ಸದಸ್ಯರ, ಶಾಸಕರ, ಸಂಸದರ ಮತ್ತು ಸಚಿವರ ಹೆಸರು, ಹಾಗೂ ಬಾವಚಿತ್ರವನ್ನು ಮುದ್ರಿಸಿ ಈ ಕಾಮಗಾರಿಯನ್ನು ತಾವು ಮಂಜೂರು ಮಾಡಿಸಿದ್ದೇವೆ ಎಂದು ಪ್ರಚುರಪಡಿಸುವ ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ಪುತ್ತೂರು ನಗರ ಸಹಿತ ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಳವಡಿಸಿರುತ್ತಾರೆ. ಇದು ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಾಗೂ ರಾಜ್ಯ ಉಚ್ಛನ್ಯಾಯಲಯದ ಆದೇಶದ ಉಲ್ಲಂಘನೆಯಾಗಿರುತ್ತದೆ. ಆದುದರಿಂದ ಕೂಡಲೇ ಇಂತಹ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ನಗರ ಸಭಾ ಪೌರಾಯುಕ್ತರಿಗೆ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಾಜಿ ನಗರ ಸಭಾ ವಿಪಕ್ಷ ನಾಯಕ ಎಚ್ ಮಹಮ್ಮದ್ ಅಲಿಯವರು ಲಿಖಿತವಾಗಿ ಮನವಿ ಸಲ್ಲಿಸಿದ್ದರು, ಇದಕ್ಕೆ ತಪ್ಪಿದಲ್ಲಿ ತಾವೇ ಜವಾಬ್ದಾರಿಯಾಗುತ್ತೀರಿ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here