ಕೂರೇಲು ಶ್ರೀ ಮಲರಾಯ ದೈವಗಳ ನೇಮೋತ್ಸವದ ಪ್ರಯುಕ್ತ ವೈಧಿಕ ಕಾರ್ಯಕ್ರಮ, ತಂಬಿಲ ಸೇವೆ, ಅನ್ನಸಂತರ್ಪಣೆ

0

ಪುತ್ತೂರು: ವಿಶೇಷ ಕಾರಣಿಕತೆಯನ್ನು ಹೊಂದಿರುವ ಆರ್ಯಾಪು ಗ್ರಾಮದ ಕೂರೇಲು ಮಣ್ಣಿನಲ್ಲಿ ನೆಲೆನಿಂತು ಭಕ್ತರನ್ನು ಸಲಹುತ್ತಿರುವ ಶ್ರೀ ಮಲರಾಯ ದೈವಸ್ಥಾನದ ಶ್ರೀ ಮಲರಾಯ ಮತ್ತು ಮಲರಾಯ ಬಂಟ ಮಹಿಶಾಂತಯ ದೈವಗಳ ನೇಮೋತ್ಸವದ ಪ್ರಯುಕ್ತ ದ.8 ರಂದು ಬೆಳಿಗ್ಗೆ ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯ ಕೊಡ್ಲಾರುರವರ ನೇತೃತ್ವದಲ್ಲಿ ವೈಧಿಕ ಕಾರ್ಯಕ್ರಮಗಳು ನಡೆಯಿತು.

ಮೊದಲಿಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಗಣಹೋಮ, ನಾಗತಂಬಿಲ ನಡೆದು ಹರಿಸೇವೆ, ಧರ್ಮದೈವಗಳ ಕಲಶಾಭಿಷೇಕ ಮತ್ತು ತಂಬಿಲ ಸೇವೆ ನಡೆಯಿತು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆದು ನೂರಾರು ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು. ಶ್ರೀ ದೈವಸ್ಥಾನದ ಆಡಳಿತ ಮುಖ್ಯಸ್ಥ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾಧಿಗಳನ್ನು ಸ್ವಾಗತಿಸಿ, ದೈವದ ಪ್ರಸಾದ ನೀಡಿ ಸತ್ಕರಿಸಿದರು. ಹರ್ಷಿತ್ ಕೂರೇಲು ಸಹಕರಿಸಿದ್ದರು. ಸರಸ್ವತಿ ಸಂಜೀವ ಪೂಜಾರಿ ಸಹಿತ ಕೂರೇಲು ಕುಟುಂಬಸ್ಥರು, ಗ್ರಾಮದ ಭಕ್ತಾಧಿಗಳು ಉಪಸ್ಥಿತರಿದ್ದರು.


ಇಂದು ರಾತ್ರಿ ನೇಮೋತ್ಸವ
ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ರಾತ್ರಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆದು ಬಳಿಕ ರಾತ್ರಿ 9 ರಿಂದ ಕಳಲ್ತಾ ಗುಳಿಗ ನೇಮೋತ್ಸವ, ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪ್ರಾರ್ಥನೆ, ಬಡಿಸುವುದು ಕಾರ್ಯಕ್ರಮ ನಡೆದು ಬಳಿಕ ಶ್ರೀ ಮಲರಾಯ ಮತ್ತು ಮಲರಾಯ ಬಂಟ ಮಜಿಶಾಂತಯ ದೈವಗಳ ನೇಮೋತ್ಸವ ಅದ್ಧೂರಿಯಾಗಿ ನಡೆಯಲಿದೆ. ದ.9 ರಂದು ಸಂಜೆ 7ರಿಂದ ಇತರ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೂರೇಲು ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮುಖ್ಯಸ್ಥರಾದ ಕೆ.ಸಂಜೀವ ಪೂಜಾರಿ ಕೂರೇಲುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here